ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ, ಸೌಲಭ್ಯ ಪಡೆಯಲು ಮನವಿ

ನಗರದಲ್ಲಿ ಲಕ್ಷ್ಮೀ ಸಹಕಾರ ಬ್ಯಾಂಕ್‌ ಶಾಖೆ ಪ್ರಾರಂಭ
Last Updated 13 ಡಿಸೆಂಬರ್ 2019, 15:20 IST
ಅಕ್ಷರ ಗಾತ್ರ

ವಿಜಯಪುರ: ‘ಗುಳೇದಗುಡ್ಡದ ಲಕ್ಷ್ಮೀ ಸಹಕಾರ ಬ್ಯಾಂಕ್‌ನ ಶಾಖೆಯನ್ನು ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಸಮೀಪ ಆರಂಭಿಸಲಾಗಿದ್ದು, ಜಿಲ್ಲೆಯ ಜನರು ಬ್ಯಾಂಕಿನಿಂದ ಸಾಲ, ಸೌಲಭ್ಯ ಪಡೆಯಬಹುದು’ ಎಂದು ಬ್ಯಾಂಕ್‌ನ ಅಧ್ಯಕ್ಷ ಸಂಪತಕುಮಾರ ರಾಠಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕ್‌ನ ವಿಜಯಪುರ ಶಾಖೆಗೆ ಸಲಹಾ ಸಮಿತಿ ಸದಸ್ಯರಾಗಿ ಚಂದ್ರಶೇಖರ ಆರ್.ಕವಟಗಿ, ಉದಯ ವಿ.ಸೋನಾರ, ಬಸವರಾಜ ಎನ್.ಬೈಚಬಾಳ, ನರಸಿಂಹ ಎಸ್.ರಾಯಚೂರು, ಸುರೇಶ ಎಸ್.ಅಕ್ಕಿ, ಶ್ರೀಕಾಂತ ಎಸ್.ಬಾಹೇತಿ ಹಾಗೂ ಸಂಗಪ್ಪ ಆರ್.ಬಡ್ಡುರೆ ಅವರನ್ನು ನೇಮಕ ಮಾಡಲಾಗಿದೆ’ ಎಂದು ಘೋಷಿಸಿದರು.

ಬ್ಯಾಂಕ್‌ನ ನಿರ್ದೇಶಕ ರಾಜಶೇಖರ ಶೀಲವಂತ ಮಾತನಾಡಿ, ‘ಲಕ್ಷ್ಮೀ ಸಹಕಾರಿ ಬ್ಯಾಂಕ್ 1913ರಲ್ಲಿ ಗುಳೇದಗುಡ್ಡದಲ್ಲಿ ಆರಂಭವಾಗಿದ್ದು, ಶತಮಾನೋತ್ಸವ ಆಚರಿಸಿಕೊಂಡಿದೆ. ಬ್ಯಾಂಕ್‌ನಲ್ಲಿ ಆರ್‌ಟಿಜಿಎಸ್, ನೆಫ್ಟ್, ಎಸ್‌ಎಂಎಸ್, ಎಟಿಎಂ, ಠೇವು ವಿಮೆ ಹಾಗೂ ಸೇಫ್ ಲಾಕರ್ ಸೌಲಭ್ಯವಿದೆ. ವಿಜಯಪುರ ಜಿಲ್ಲೆಯ ಜನತೆ ಈ ಸೌಲಭ್ಯಗಳ ಸಸುಪಯೋಗ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಬ್ಯಾಂಕ್‌ನಲ್ಲಿ 14 ಸಾವಿರ ಸದಸ್ಯರಿದ್ದು, ₹ 7.29 ಕೋಟಿ ಶೇರು ಬಂಡವಾಳ, ₹ 8.06 ಕೋಟಿ ನಿಧಿ, ₹ 169.66 ಕೋಟಿ ಠೇವುಗಳು, ₹ 114.42 ಕೋಟಿ ಸಾಲ ವಿತರಿಸಲಾಗಿದೆ. ಬ್ಯಾಂಕ್‌ ಸದ್ಯ 8 ಶಾಖೆಗಳನ್ನು ಹೊಂದಿದ್ದು, ₹ 197 ಕೋಟಿ ದುಡಿಯುವ ಬಂಡವಾಳ ಹೊಂದಿದೆ’ ಎಂದು ಮಾಹಿತಿ ನೀಡಿದರು.

‘ಸಣ್ಣ ಸಾಲಗಾರರನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕಿಂಗ್ ಸೇವೆಯನ್ನು ನೀಡಲಾಗುತ್ತಿದೆ. ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಲ ಸೌಲಭ್ಯ ನೀಡಲಾಗುತ್ತಿದೆ’ ಎಂದರು.

ಸಲಹಾ ಸಮಿತಿ ಸದಸ್ಯ ಚಂದ್ರಶೇಖರ ಆರ್.ಕವಟಗಿ ಮಾತನಾಡಿ, ‘ಬ್ಯಾಂಕಿನ ಉನ್ನತೀಕರಣಕ್ಕಾಗಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಠೇವು ಹೆಚ್ಚಳ, ಸಾಲ ವಿತರಣೆ, ಜನರ ವಿಶ್ವಾಸ ಗಳಿಸುವುದು ನಮ್ಮ ಧ್ಯೇಯವಾಗಿದೆ’ ಎಂದು ತಿಳಿಸಿದರು.

ನಿರ್ದೇಶಕ ಮೃತ್ಯುಂಜಯ ಬಿ.ಕರನಂದಿ, ಉಪಪ್ರಧಾನ ವ್ಯವಸ್ಥಾಪಕ ಡಿ.ಬಿ.ಕರಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT