ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಣ್ಣ ರಸ್ತೆಗೆ ಪುಲಿಕೇಶಿ ವ್ಯಾಯಾಮ ಶಾಲೆ ಸ್ಥಳಾಂತರ

Last Updated 17 ಅಕ್ಟೋಬರ್ 2018, 12:50 IST
ಅಕ್ಷರ ಗಾತ್ರ

ಶಿವಮೊಗ್ಗ: ಬೆಕ್ಕಿನ ಕಲ್ಮಠದ ಎದುರಿನ ಡಾ.ಸಿ.ಎಲ್. ರಾಮಣ್ಣ ರಸ್ತೆಯ ಕೋಟೆ ಸಂಕೀರ್ಣ ಕಟ್ಟಡಕ್ಕೆ ಪುಲಿಕೇಶಿ ವ್ಯಾಯಾಮಶಾಲೆ ಸ್ಥಳಾಂತರಗೊಂಡಿದೆ.

ಅತ್ಯಂತ ಹಳೆಯ ವ್ಯಾಯಾಮ ಶಾಲೆ ಹಿಂದೆ ಜಿಲ್ಲಾ ಪಂಚಾಯಿತಿ ಮುಂಭಾಗದ ನೀರಿನ ಟ್ಯಾಂಕ್ ಬಳಿ ಇತ್ತು. ಹೊಸ ಟ್ಯಾಂಕ್ ನಿರ್ಮಾಣದ ಕಾರಣ ಸ್ಥಳಾಂತರಿಸಲಾಗಿದೆ ಎಂದು ವ್ಯಾಯಾಮಶಾಲೆ ಕಾರ್ಯಾಧ್ಯಕ್ಷ ಎಸ್. ಉಮೇಶ್ ವರ್ಮ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ಸ್ಥಳಾಂತರ ಮಾಡುವಾಗ ಹಲವು ಪರಿಕರಗಳು ನಾಶವಾಗಿವೆ. ಎಲ್ಲವನ್ನೂ ಮತ್ತೆ ಕೊಂಡುಕೊಳ್ಳಲಾಗಿದೆ. ಅ. 27ರಂದು ಕ್ರೀಡಾಚಟುವಟಿಕೆಗಳು ಆರಂಭವಾಗುತ್ತವೆ. ಅ. 23 ರಿಂದ 25ರವರೆಗೆ ಪ್ರವೇಶ ಅರ್ಜಿಗಳನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನೀಡಲಾಗುವುದು. ದಿನಕ್ಕೆ 50 ಜನರಿಗೆ ಪ್ರವೇಶ ನೀಡಲಾಗುವುದು ಎಂದರು.

ಅ. 18ರಂದು ಸಂಜೆ 6ಗಂಟೆಗೆ ಆಯುಧ ಪೂಜೆ ಜತೆಗೆ ವ್ಯಾಯಾಮ ಶಾಲೆ ಆರಂಭೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್, ಹರೀಶ್, ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT