ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೂತನ ಕೈಪಿಡಿ

7

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೂತನ ಕೈಪಿಡಿ

Published:
Updated:

ಶಿವಮೊಗ್ಗ: ಸ್ವೀಟ್ ಪಿಯು ಕಾಲೇಜು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೂತನ ಕೈಪಿಡಿ ಹೊರತಂದಿದೆ.

ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಗ್ರಾಮೀಣ ಮಕ್ಕಳು ಹೆಚ್ಚಿನ ಅಂಕ ಗಳಿಸಲು ಈ ಕೈಪಿಡಿ ಸಹಕಾರಿಯಾಗಲಿದೆ. 6 ವರ್ಷಗಳಿಂದ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಮಾಧ್ಯಮದಲ್ಲಿ ಪಠ್ಯಕ್ರಮ ಹಾಗೂ ನೀಲಿ ನಕ್ಷೆ ಆಧರಿಸಿ ಈ ಕೈಪಿಡಿ ರಚಿಸಲಾಗಿದೆ ಎಂದು ಕಾಲೇಜಿನ ಕಾರ್ಯದರ್ಶಿ ಎಸ್.ಎಂ. ದಿನೇಶ್, ಕಾಲೇಜಿನ ಪ್ರಾಂಶುಪಾರ ಎಸ್.ಟಿ. ಧರ್ಮರಾಜ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

10ಕ್ಕೂ ಹೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳಿಗೆ ನುರಿತ ಶಿಕ್ಷಕರಿಂದ ಉತ್ತರ ನೀಡಲಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಯ ಬಳಸಿಕೊಳ್ಳಲು ಇದು ಸಹಕಾರಿಯಾಗಲಿದೆ ಎಂದರು.

ಪರೀಕ್ಷೆಯ ಸಮಯದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತೂ ಮಾಹಿತಿ ನೀಡಲಾಗಿದೆ. ಉಚಿತ ಪ್ರತಿ ಪಡೆಯಲು ವೆಂಕಟೇಶ ನಗರದ ಕಚೇರಿಗೆ ಭೇಟಿ ನೀಡಬಹುದು. ದೂ: 08182 220005 ಅಥವಾ 405889 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೊಷ್ಠಿಯಲ್ಲಿ ಉಪನ್ಯಾಸಕರಾದ ಜಿ.ಎಂ. ಸಂತೋಷ್ ಕುಮಾರ್, ಅರ್ಚನಾ ರೋಖಡೆ, ಸೃತಿ ರಾಯ್ಕರ್, ಟಿ. ಪ್ರಣೀತ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !