ಸರ್ಕಾರಿ ಆಸ್ಪತ್ರೆಗೆ ನುಗ್ಗುವ ಹಾವು !

7
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಸ್ಯೆ‌ಗಳ ಕುರಿತು ಪ್ರಸ್ತಾಪ

ಸರ್ಕಾರಿ ಆಸ್ಪತ್ರೆಗೆ ನುಗ್ಗುವ ಹಾವು !

Published:
Updated:
Deccan Herald

ಮಾಗಡಿ: ಗುಡ್ಡಗಾಡು ಪ್ರದೇಶದ ಅಲೆಮಾರಿ ಮತ್ತು ಇತರೆ ಸಮುದಾಯದವರ ಆರೋಗ್ಯ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕೆಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಎಲ್ಲರೂ ನೋಂದಾಯಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸುರಕ್ಷಾ ಸಮಿತಿ ರಚಿಸಿ, ಆಸ್ಪತ್ರೆಗಳ ಕುಂದು ಕೊರತೆ ಬಗ್ಗೆ ಪ್ರತಿ ತಿಂಗಳ 3ನೇ ಮಂಗಳವಾರ ಸಭೆ ನಡೆಸಲು‌ ಸೂಚನೆ ನೀಡಿದರು.

ಕುದೂರು ಮತ್ತು ತಿಪ್ಪಸಂದ್ರಗಳಲ್ಲಿ ಸುಸಜ್ಜಿತವಾದ 24 ಗಂಟೆಯೂ ಆರೋಗ್ಯ ಸೇವೆ ನೀಡುವ ಕೇಂದ್ರ ಸರ್ಕಾರದ ಸಮುದಾಯ ಆರೋಗ್ಯ ಕೇಂದ್ರ (ಸಿಎಸ್‌ಸಿ) ಆಸ್ಪತ್ರೆ ಆರಂಭಿಸಿ, ವೈದ್ಯರು ಮತ್ತು ಎಎನ್‌ಎಂಗಳಿಗೆ ವಸತಿಗೃಹ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ.ಎಂ.ಸಿ.ಚಂದ್ರಶೇಖರ್‌ ಮಾತನಾಡಿ, ಡೆಂಗಿ ಮತ್ತು ಚಿಕೂನ್‌ ಗುನ್ಯಾ ರೋಗಗಳು ನಿಯಂತ್ರಣದಲ್ಲಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಮನವಿ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಟಿ.ಅಮರನಾಥ್‌ ಮಾತನಾಡಿ, ಸರ್ಕಾರದ ಸವಲತ್ತು ಬಳಸಿಕೊಂಡು ಮಕ್ಕಳು, ಗರ್ಭಿಣಿ, ಬಾಣಂತಿಯರ ಆರೈಕೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.

ಮರೂರು ಉಪ ಆರೋಗ್ಯ ಕೇಂದ್ರದ ಡಾ.ಚಂದ್ರಕಲಾ, ಸಂಕೀಘಟ್ಟದ ಡಾ.ರಾಮರಾಜ ಅರಸ್‌, ತಗ್ಗಿಕುಪ್ಪೆ ಆಸ್ಪತ್ರೆ ಡಾ.ರೇಖಾ, ವಿಜಿ ದೊಡ್ಡಿಯ ಡಾ.ರಶ್ಮಿ, ಅಜ್ಜನಹಳ್ಳಿಯ ಡಾ.ಶ್ರೀಧರ್‌, ಮಣಿಗನಹಳ್ಳಿಯ ಡಾ.ಸತೀಶ್‌, ತಿಪ್ಪಸಂದ್ರದ ಡಾ.ತನುಜ, ಚಕ್ರಬಾವಿಯ ಡಾ.ಯದು ನಂದನ್‌, ಸುಗ್ಗನಹಳ್ಳಿಯ ಡಾ.ಪ್ರಕಾಶ್‌, ಸೋಲೂರಿನ ಡಾ.ವಿಜಯಾ, ಗೆಜ್ಜಗಾರು ಗುಪ್ಪೆಯ ಡಾ.ರಾಮಚಂದ್ರ, ಮಾಗಡಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ರಾಜೇಶ್‌ ತಮ್ಮ ಆಸ್ಪತ್ರೆಗಳ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಹಾವುಗಳು ನುಗ್ಗುತ್ತಿವೆ. ಕಾಂಪೌಂಡ್‌ ಇಲ್ಲದೆ ರಾತ್ರಿ ಕುಡುಕರ ಹಾವಳಿ ಇದೆ. ಹೆರಿಗೆ ಸವಲತ್ತುಗಳಿಲ್ಲ ಎಂದು ಮರೂರು ಆಸ್ಪತ್ರೆ ವೈದ್ಯೆ ಚಂದ್ರಕಲಾ ವಿವರಿಸಿದರು.

ಸಂಬಳ ಹೆಚ್ಚಿಸಿ: ಸಭೆಯಲ್ಲಿ ಭಾಗವಹಿಸಿದ್ದ 157 ಆಶಾ ಕಾರ್ಯಕರ್ತೆಯರು ಒಕ್ಕೊರಲಿನಿಂದ ಸಂಬಳ ಹೆಚ್ಚಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌, ಪ್ರಭಾರ ಕ್ಷೇತ್ರ ಆರೋಗ್ಯಾಧಿಕಾರಿ ಆರ್‌.ರಂಗನಾಥ್‌, ಹಿರಿಯ ಪುರುಷ ಆರೋಗ್ಯ ಸಹಾಯಕ ತುಕಾರಾಮ್‌, ಮಹಿಳಾ ಆರೋಗ್ಯ ಸಹಾಯಕಿ ಮಂಜುಳ, ಶಿವಸ್ವಾಮಿ ಇದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !