ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಭ್ಯರ್ಥಿ ಆಸ್ತಿ ₹ 67 ಕೋಟಿ

Last Updated 15 ಅಕ್ಟೋಬರ್ 2018, 15:46 IST
ಅಕ್ಷರ ಗಾತ್ರ

ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ₹ 67 ಕೋಟಿ ಆಸ್ತಿ ಒಡೆಯ. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳಿಗೆ ನೀಡಿರುವ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.

2009ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರ ಆಸ್ತಿ ಮೌಲ್ಯ ₹ 6 ಕೋಟಿ. 2014ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆಗೆ ಈ ಆಸ್ತಿ ₹ 30 ಕೋಟಿ ಇತ್ತು. ನಂತರ 4 ವರ್ಷಗಳಲ್ಲಿಅದು ಮತ್ತೆ ದ್ವಿಗುಣಗೊಂಡಿದೆ. ಪತ್ನಿ ತೇಜಸ್ವಿನಿ ಹೆಸರಲ್ಲಿ ₹ 9 ಕೋಟಿ ಆಸ್ತಿ ಇದೆ.

2017–18ನೇ ಸಾಲಿನಲ್ಲಿ ಅವರು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದವಿವರದ ಪ್ರಕಾರ ಅವರ ವಾರ್ಷಿಕ ಆದಾಯ ₹ 1.12 ಕೋಟಿ, ಪತ್ನಿ ಆದಾಯ29.51 ಲಕ್ಷ.

ರಾಘವೇಂದ್ರ ತೇಜಸ್ವಿನಿ (₹ ಕೋಟಿಗಳಲ್ಲಿ)

ಚರಾಸ್ತಿ: 28.92 ಕೋಟಿ 2.92 ಕೋಟಿ.

ಸ್ಥಿರಾಸ್ತಿ: 22.71 ಕೋಟಿ 4.04 ಕೋಟಿ

ನಗದು: 2.01 ಲಕ್ಷ 5.19 ಲಕ್ಷ

ಬ್ಯಾಂಕ್ ಖಾತೆ: 28.22 ಲಕ್ಷ 6.58 ಲಕ್ಷ

ಠೇವಣಿ: 5.15 ಕೋಟಿ 3.66 ಲಕ್ಷ

ಷೇರು 9.78 ಕೋಟಿ 1.89 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT