ಸ್ಮಾಶನಭೂಮಿ ಮಂಜೂರು ಮಾಡದ ಜಿಲ್ಲಾಡಳಿತ: ರಸ್ತೆಯಲ್ಲೇ ಶವ ಇಟ್ಟು ಪ್ರತಿಭಟನೆ

7

ಸ್ಮಾಶನಭೂಮಿ ಮಂಜೂರು ಮಾಡದ ಜಿಲ್ಲಾಡಳಿತ: ರಸ್ತೆಯಲ್ಲೇ ಶವ ಇಟ್ಟು ಪ್ರತಿಭಟನೆ

Published:
Updated:
Deccan Herald

ಶಿವಮೊಗ್ಗ: ಸ್ಮಾಶನಭೂಮಿ ಮಂಜೂರು ಮಾಡದ ಜಿಲ್ಲಾಡಳಿತದ ಧೋರಣೆ ಖಂಡಿಸಿ ಚಿನ್ಮನೆ ಗ್ರಾಮಸ್ಥರು ಗುರುವಾರ ರಸ್ತೆಯಲ್ಲೇ ಶವ ಇಟ್ಟು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಚಿನ್ಮನೆ ಗ್ರಾಮದಲ್ಲಿ ಇದುವರೆಗೂ ಸ್ಮಾಶನ ಭೂಮಿ ಇಲ್ಲ. 17 ವರ್ಷಗಳಿಂದ ಭೂಮಿಗಾಗಿ ಹೋರಾಟ ಮಾಡುತ್ತಿದ್ದೇವೆ. ಗ್ರಾಮದ ಹೊರಭಾಗದಲ್ಲಿ 2 ಎಕರೆ 10 ಗುಂಟೆ ಸರ್ಕಾರದ ಜಾಗವಿದ್ದರೂ, ಮಂಜೂರು ಮಾಡುತ್ತಿಲ್ಲ. ಹಲವು ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಯಾರೇ ಮೃತಪಟ್ಟರೂ, ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡುತ್ತಿದ್ದೇವೆ. ಕೆಲವರು ತಮ್ಮ ಜಮೀನುಗಳಲ್ಲಿ ಕಾರ್ಯ ನೆರವೇರಿಸುತ್ತಾರೆ. ಸ್ವಂತ ಜಮೀನು ಇಲ್ಲದ ಕುಟುಂಬಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ. ಜನರ ಸಮಸ್ಯೆ ಅಧಿಕಾರಿಗಳು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ದೂರಿದರು.

ಗ್ರಾಮದ ವಕೀಲ ಮಹೇಂದ್ರ ಅವರು ಬುಧವಾರ ಮೃತಪಟ್ಟಿದ್ದರು. ಶವ ಯಾತ್ರೆ ಮಾಡುವಾಗ ಗ್ರಾಮಸ್ಥರ ಆಕ್ರೋಶ ಕಟ್ಟೆ ಒಡೆಯಿತು. ರಸ್ತೆಯಲ್ಲಿ ಶವ ಇಟ್ಟು ಪ್ರತಿಭಟನೆ ಇಳಿದರು. ಗ್ರಾಮಸ್ಥರು ದಿಢೀರ್ ಪ್ರತಿಭಟನೆಗೆ ಇಳಿದ ಪರಿಣಾಮ ರಸ್ತೆ ಮಧ್ಯೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು, ಪ್ರವಾಸಿಗರು ಪರದಾಡಿದರು. 

ವಿಷಯ ತಿಳಿದು ತಹಶೀಲ್ದಾರ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ನೀತಿ ಸಂಹಿತೆ ಕಾರಣ ಭೂಮಿ ಮಂಜೂರು ಮಾಡಲು ಸಾಧ್ಯವಿಲ್ಲ. ಲೋಕಸಭಾ ಉಪ ಚುನಾವಣೆ ಮುಗಿದ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !