ಒಕ್ಕಲೆಬ್ಬಿಸದಂತೆ ನಾಗರಬಾವಿ ಗ್ರಾಮಸ್ಥರ ಆಗ್ರಹ

ಶನಿವಾರ, ಏಪ್ರಿಲ್ 20, 2019
27 °C

ಒಕ್ಕಲೆಬ್ಬಿಸದಂತೆ ನಾಗರಬಾವಿ ಗ್ರಾಮಸ್ಥರ ಆಗ್ರಹ

Published:
Updated:
Prajavani

ಶಿವಮೊಗ್ಗ: ಹಲವು ದಶಕಗಳಿಂದ ನೆಲೆನಿಂತಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿ ನಾಗರಬಾವಿ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ನಾಗರಬಾವಿ ಗ್ರಾಮದ ಸರ್ವೆ ನಂಬರ್ 2/1ರಲ್ಲಿ 15 ಕುಟುಂಬಗಳು ನೆಲೆಸಿವೆ. ಈ ಜಮೀನು ಮೋಸದಿಂದ ಮಾರಾಟ ಮಾಡಲಾಗಿದೆ. ಹಲವು ದಶಕಗಳು ಹಳೆಯದಾದ ಮನೆಗಳಿಗೆ ಕಂದಾಯ, ನೀರಿನ ಕಂದಾಯ, ಜಮೀನಿನ ಕಂದಾಯ ಕಾಲಕಾಲಕ್ಕೆ ಪಾವತಿಸಲಾಗಿದೆ. ಆಶ್ರಯ ಮನೆಗಳೂ ಸೇರಿದಂತೆ ಎಲ್ಲ ಸವಲತ್ತು ಕಲ್ಪಿಸಲಾಗಿದೆ. ದಾಖಲೆಗಳು ಇದ್ದರೂ ಮೋಸ ಮಾಡಲಾಗಿದೆ ಎಂದು ಆರೋಪಿಸಿದರು.

ಎಲ್ಲ ಕುಟುಂಬಗಳ ಬಳಿಯೂ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಇವೆ. ಇದೇ ವಿಳಾಸಕ್ಕೆ ಸರ್ಕಾರಿ ಸೌಲಭ್ಯ ನೀಡಲಾಗಿದೆ. ಜಮೀನು ಮಾರಾಟ ಮಾಡಿರುವ ಪರಿಣಾಮ ಜೀವನ ನಡೆಸುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !