ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ನೀರಾವರಿಗೆ ಆಗ್ರಹ

Last Updated 26 ಆಗಸ್ಟ್ 2019, 8:52 IST
ಅಕ್ಷರ ಗಾತ್ರ

ವಿಜಯಪುರ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗೆ ಶಾಶ್ವತವಾಗಿ ನೀರು ಹರಿಸುವಂತೆ ಒತ್ತಾಯಿಸಿ ಭಾರತ ಯುವ ವೇದಿಕೆ ಚಾರಿಟಬಲ್‌ ಫೌಂಡೇಷನ್‌ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಲಾಯಿತು.

ಗುತ್ತಿ ಬಸವಣ್ಣ ಕಾಲುವೆಗೆ ನೀರು ಹರಿಸುವ ಕುರಿತು ಸಮಸ್ತ ತಾಂಬಾ ಹಾಗೂ ಸುತ್ತಲಿನ ಗ್ರಾಮದ ರೈತರಿಂದ ತಾಂಬಾ ಗ್ರಾಮದಲ್ಲಿ ‘ಸರದಿ ಸತ್ಯಾಗ್ರಹ’ ನಡೆದ ಪ್ರಯುಕ್ತ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

‘ಸರ್ಕಾರದ ಆದೇಶದ ಪ್ರಕಾರ ಸತತ ನೀರು ಹರಿಸುವ ಭರವಸೆ ಈಡೇರಿದ್ದರೂ ಕಾರಣಾಂತರಗಳಿಂದ ಎರಡು ವರ್ಷಗಳಿಂದ ಕಾಲುವೆಗೆ ನೀರು ಬಂದಿಲ್ಲ. ಇದರಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದೆ. ಆದರೂ ಕೂಡ ಕಾಲುವೆಗಳಿಗೆ ನೀರು ಹರಿಸುವ ಕೆಲಸವಾಗಿಲ್ಲ. ಜಲಾಶಯಗಳು ಭರ್ತಿಯಾಗಿದ್ದರೂ ನೀರು ಹರಿಸುವ ಸಂಬಂಧ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿಲ್ಲ. ಈಗಲಾದರೂ ಈ ಬಗ್ಗೆ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಫೌಂಡೇಷನ್‌ ರಾಜ್ಯ ಘಟಕದ ಅಧ್ಯಕ್ಷ ಸುನೀಲ ರಾ.ಜೈನಾಪುರ, ಲೇಖಕ ಸಂತೋಷಕುಮಾರ ನಿಗಡಿ, ಶಿವಾನಂದ ಮಳಗೊಂಡ, ಪದಾಧಿಕಾರಿಗಳಾದ ಸಾಗರ ಐಹೊಳಿ, ಪ್ರಶಾಂತ ಪೋಳ, ರಾಹುಲ ರಾಠೋಡ, ಮಹಾಂತೇಶ ಹಿರೇಮಠ, ಸತೀಶ ಕಾಂಬಳೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT