ಶುಕ್ರವಾರ, ನವೆಂಬರ್ 15, 2019
20 °C

ಮದ್ಯ ಮಾರಾಟ: ಹಾರನಹಳ್ಳಿಯಲ್ಲಿ ಮಹಿಳೆಯರ ಪ್ರತಿಭಟನೆ

Published:
Updated:

ಶಿವಮೊಗ್ಗ: ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಹಾರನಹಳ್ಳಿ ಸ್ತ್ರೀ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಅತಿಸಣ್ಣ ರೈತರು, ಕೃಷಿ ಕಾರ್ಮಿಕರು ಹೆಚ್ಚಾಗಿರುವ ಗ್ರಾಮದಲ್ಲಿ ವೀರಭದ್ರೇಶ್ವರ, ಬನಶಂಕರಿ, ಮಹೇಶ್ವರ ದೇವಾಲಯಗಳಿವೆ. ಇಂತಹ ಸ್ಥಳದಲ್ಲಿ ಮದ್ಯದಂಗಡಿಗೆ ಪರವಾನಗಿ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮದ್ಯ ಸೇವನೆಯಿಂದ ಹಲವು ಕುಟುಂಬಗಳು ಬೀದಿಗೆ ಬರುತ್ತವೆ. ಕೂಲಿ ಕಾರ್ಮಿಕರ ಬದುಕು ಮೂರಾಬಟ್ಟೆಯಾಗುತ್ತದೆ. ಗ್ರಾಮದಲ್ಲಿ ಗಲಾಟೆಗಳಾಗುತ್ತಿವೆ. ಯುವಕರು ಮದ್ಯಪಾನದ ದುಶ್ಚಟಕ್ಕೆ ಒಳಗುತ್ತಾರೆ. ಗ್ರಾಮದ ಸಾಮರಸ್ಯ ಹಾಳಾಗುತ್ತದೆ ಎಂದು ದೂರಿದರು

ಗ್ರಾಮದ ಚಂದ್ರಮ್ಮ, ಸುನಿತಾ, ಪ್ರೀತಿ, ಕವಿತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)