ಗುರುವಾರ , ಡಿಸೆಂಬರ್ 12, 2019
26 °C
ರಾಮನಗರ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ

ಕಸ ವಿಲೇವಾರಿ, ಬೀದಿನಾಯಿ ಹಾವಳಿ ನಿಯಂತ್ರಣಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ರಾಮನಗರ: ಕಸದ ವಿಲೇವಾರಿ ಹಾಗೂ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ಆಲ್‌ ಇಂಡಿಯಾ ಮಜ್ಲೀಸ್ ಎ ಇತ್ತೇಹಾದೂಲ್ ಮುಸ್ಲೀಮೀನ್‌ ಸಂಘಟನೆಯ ಸದಸ್ಯರು ನಗರಸಭೆ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರಸಭೆಯ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. 31 ವಾರ್ಡುಗಳಲ್ಲಿನ ಅಷ್ಟೂ ಕಸವನ್ನು 18 ಹಾಗೂ 19ನೇ ವಾರ್ಡ್‌ ವ್ಯಾಪ್ತಿಯಲ್ಲಿ ಸುರಿಯಲಾಗುತ್ತಿದೆ. ಇದರಿಂದ ಇಲ್ಲಿನ ಅಂತರ್ಜಲವು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ಈ ವಾರ್ಡುಗಳ ಪ್ರದೇಶದ ಜನರಿಗೆ ಗಂಟಲು ನೋವು, ಮೈ–ಕೈ ಕೆರೆತ, ಅಲರ್ಜಿ, ಜ್ವರ ಹಾಗೂ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿ ಕಸ ಹಾಕದಂತೆ ಜನರು ಹೋರಾಟ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸ್ಥಳೀಯ ಶಾಸಕಿ ಅನಿತಾ ಅವರು ಇಲ್ಲಿನ ಕಸದ ಸಮಸ್ಯೆಗೆ ಸ್ಪಂದಿಸಿ ಪರ್ಯಾಯ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ನಗರದಲ್ಲಿ ಎಲ್ಲೆಂದರಲ್ಲಿ ಕಸವು ಸಂಗ್ರಹಣೆ ಆಗುತ್ತಿರುವ ಕಾರಣ ಬೀದಿನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಕ್ಕಳು, ವೃದ್ಧರಾಗಿಯಾಗಿ ಜನರ ಮೇಲೆ ಈ ನಾಯಿಗಳು ನಿರಂತರವಾಗಿ ದಾಳಿ ನಡೆಸುತ್ತಿವೆ. ನಗರಸಭೆ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದು ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ಕೂಡಲೇ ಶಾಶ್ವತ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕು. ನಾಯಿಗಳ ಹಾವಳಿಗೆ ನಿಯಂತ್ರಣ ಹಾಕಬೇಕು. ಇಲ್ಲವಾದಲ್ಲಿ ಅದೇ ನಾಯಿಗಳನ್ನು ಹಿಡಿದು ತಂದು ನಗರಸಭೆಯಲ್ಲಿ ಕೂಡಿಹಾಕಲಾಗುವುದು ಎಂದು ಎಚ್ಚರಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಚಾಂದ್ ಪಾಷ, ಜಿಲ್ಲಾ ಜಂಟಿ ಕಾರ್ಯದರ್ಶಿ ಮೊಹಸಿನ್‌ ಖಾನ್‌, ಚನ್ನಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಸಾದಿಕ್‌ ಖಾನ್, ರಾಮನಗರ ತಾಲ್ಲೂಕು ಘಟಕದ ಜಂಟಿ ಕಾರ್ಯದರ್ಶಿ ಜಮೀರ್ ಪಾಷ, ಮೊಹಮ್ಮದ್ ಅತೀಕ್‌ ಇದ್ದರು.

 

 

ಪ್ರತಿಕ್ರಿಯಿಸಿ (+)