ರಸ್ತೆ, ಚರಂಡಿ ದುರಸ್ತಿಗಾಗಿ ಪ್ರತಿಭಟನೆ

7

ರಸ್ತೆ, ಚರಂಡಿ ದುರಸ್ತಿಗಾಗಿ ಪ್ರತಿಭಟನೆ

Published:
Updated:
ಹುಲಿಕಲ್‌ ಗ್ರಾಮ ಪಂಚಾಯಿತಿ ಮುಂದೆ ದಲಿತ ಪರ ಹೋರಾಟಗಾರರು ಗುರುವಾರ ಪ್ರತಿಭಟನೆ ನಡೆಸಿದರು

ಕುದೂರು (ಮಾಗಡಿ): ದಲಿತ ಕಾಲೊನಿಗಳಿಗೆ ಮೂಲ ಸವಲತ್ತು ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಲಿತಪರ ಹೋರಾಟಗಾರ ತೊರೆರಾಮನಹಳ್ಳಿ ನರಸಿಂಹ ಮೂರ್ತಿ ದೂರಿದ್ದಾರೆ.

ಹುಲಿಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿ ಮಾರುತಿ ನಗರದ ಹರಿಜನ ಕಾಲೊನಿಯಲ್ಲಿ ರಸ್ತೆ ಮತ್ತು ಚರಂಡಿ ದುರಸ್ತಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಗತಿಪರ ಚಿಂತಕ ಚೌಡಪ್ಪ ಮಾತನಾಡಿ, ಸರ್ವರಿಗೆ ಸಮಬಾಳು, ಸರ್ವರಿಗೆ ಸಮ‍ಪಾಲು ಎಂಬ ಸಂವಿಧಾನದ ಆಶಯ ಗಾಳಿಗೆ ತೂರಿಲಾಗಿದೆ ಎಂದರು.

ಹೋರಾಟಗಾರರಾದ ಚಿಕ್ಕರಾಜು, ಲಕ್ಷ್ಮಯ್ಯ, ಗಂಗರಾಜು.,ಬೋಜಣ್ಣ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !