ರೈಲ್ವೆ ಕೆಳ ಸೇತುವೆ ದುರಸ್ತಿಗೆ ಆಗ್ರಹ

7

ರೈಲ್ವೆ ಕೆಳ ಸೇತುವೆ ದುರಸ್ತಿಗೆ ಆಗ್ರಹ

Published:
Updated:
Deccan Herald

ರಾಮನಗರ: ಇಲ್ಲಿನ ರೈಲು ನಿಲ್ದಾಣದ ಬಳಿಕ ರೈಲ್ವೆ ಕೆಳಸೇತುವೆಯು ಹದಗೆಟ್ಟಿದ್ದು, ಶೀಘ್ರ ದುರಸ್ತಿಪಡಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಕ್ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಈ ಸೇತುವೆಯ ಮೂಲಕ 12 ವಾರ್ಡ್‌ಗಳಿಗೆ ಹಾಗೂ ಹುಣಸನಹಳ್ಳಿ, ಕನಕಪುರಕ್ಕೆ ಸಂಚರಿಸಬೇಕು. ಸೇತುವೆಯ ಕೆಳಭಾಗ ಶಿಥಿಲಗೊಂಡಿದ್ದು, ಸಂಪೂರ್ಣವಾಗಿ ರಸ್ತೆ ಕಿತ್ತುಹೋಗಿದೆ. ಮಳೆ ಬಂದರೆ ನೀರು ನಿಂತುಕೊಂಡು ಜನರಿಗೆ, ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.

ಕೆಳಸೇತುವೆಯಲ್ಲಿ ಮಳೆನೀರಿನ ಜತೆಗೆ ಚರಂಡಿ ನೀರು ನಿಂತುಕೊಂಡು ದುರ್ವಾಸನೆ ಬರುತ್ತಿದೆ. ಕೆಳಸೇತುವೆಯಲ್ಲಿ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಿ ಎಂದು ಹಲವು ಬಾರಿ ನಗರಸಭೆಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೆಳಸೇತುವೆಯ ಮೂಲಕ ದಿನದ 24 ಗಂಟೆಯೂ ಜನರು ಸಂಚರಿಸುತ್ತಿರುತ್ತಾರೆ. ಇಲ್ಲಿ ವಿದ್ಯುತ್‌ ದೀಪಗಳ ವ್ಯವಸ್ಥೆಯನ್ನು ಮಾಡಬೇಕು. ಆರ್‌ಎನ್‌ಎ ಸಭಾಂಗಣ ಮುಂಭಾಗ ಇರುವ ಯುಜಿಡಿಯನ್ನು ದುರಸ್ತಿಗೊಳಿಸಬೇಕು. ಕೆಳ ಸೇತುವೆಯನ್ನು ಸರಿಪಡಿಸಿ ನಾಗರಿಕರು ಸಂಚರಿಸಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಎಸ್‌ಡಿಪಿಐ ಪದಾಧಿಕಾರಿಗಳಾದ ಶಕೀಲ್ ಪಾಷಾ, ಸಯ್ಯದ್ ಅಸಾದ್‌ ಉಲ್ಲಾ, ಸಯ್ಯದ್ ಮತೀನ್, ಹುಮಾಯೂನ್ ಷರೀಫ್‌, ಸಲೀಂ, ಆಮ್ಜದ್‌ ಷರೀಫ್‌, ರೈತ ಮುಖಂಡ ಸೀಬೆಕಟ್ಟೆ ಕೃಷ್ಣಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !