ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತಾಳ: ವಟಗಲ್ ಬಸವೇಶ್ವರ ಸಹಕಾರಿ ಸಂಘಕ್ಕೆ ₹ 5.89 ಲಕ್ಷ ಲಾಭ

Last Updated 27 ನವೆಂಬರ್ 2021, 11:39 IST
ಅಕ್ಷರ ಗಾತ್ರ

ಕವಿತಾಳ: ‘ಸಹಕಾರ ಸಂಘಗಳ ಉತ್ತಮ ಸೇವೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ವಟಗಲ್ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ಇಲ್ಲೂರು ಹೇಳಿದರು.

ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ 2ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ‘ಸಿಬ್ಬಂದಿಯ ಪರಿಶ್ರಮ ಮತ್ತು ಗ್ರಾಹಕರ ಸಹಕಾರದಿಂದ ಸಂಘವು ಲಾಭದತ್ತ ಮುನ್ನಡೆಯುತ್ತಿದೆ, ಪ್ರಸಕ್ತ ವರ್ಷ ಸಂಘವು ಅಂದಾಜು ₹ 5.89 ಲಕ್ಷ ನಿವ್ವಳ ಲಾಭ ಗಳಿಸಿದ್ದು ಷೇರುದಾರರಿಗೆ ಶೇ 8 ರಷ್ಟು ಲಾಭಾಂಶ ನೀಡುವುದಾಗಿ’ ಘೋಷಿಸಿದರು.

ಸಂಘದ ಅಧ್ಯಕ್ಷ ನಾಗರಾಜ ಪಾಟೀಲ್‍, ನಿರ್ದೇಶಕರಾದ ಪಂಪಾಪತಿ ವಟಗಲ್, ತ್ರಿಪುರಾಂತಕ ಅಂಗಡಿ, ಶಿವರಾಜಪ್ಪಗೌಡ ಪಾಟೀಲ್, ಶಿವಪುತ್ರಪ್ಪ ಭೋಗಾವತಿ, ಪ್ರವೀಣ ಕುಮಾರ ಹಣಿಗಿ, ವಿಶ್ವನಾಥರೆಡ್ಡ, ತ್ರಿಶೂಲಧರ ಅಮೀನಗಡ, ಬಸವರಾಜ ಬಡಿಗೇರ, ಸುಭಾಷ್‍ ಪಾಟೀಲ್‍, ವೀರಭದ್ರಪ್ಪ ಹಳ್ಳಿ, ನೆಹರೂ ಬಾಗೋಡಿ, ಸಲಹಾ ಸಮಿತಿ ಸದಸ್ಯ ಬಸವರಾಜ ಬುಂಕಲದೊಡ್ಡಿ, ವ್ಯವಸ್ಥಾಪಕ ಮಲ್ಲನಗೌಡ, ಕರಿಯಪ್ಪ, ದುರುಗಪ್ಪ, ರಡ್ಡೆಪ್ಪ, ಬಸವರಾಜ ಮತ್ತು ಮಹೇಶ ಪಾಟೀಲ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT