ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

7

ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Published:
Updated:
Deccan Herald

ದೇವದುರ್ಗ: ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲದ ಬೆಲೆ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಜನ ಸಾಮಾನ್ಯರಿಗೆ ತೊಂದರೆ ಎದುರಾಗಿದೆ ಎಂದು ಆರೋಪಿಸಿ ರಾಷ್ಟ್ರವ್ಯಾಪ್ತಿ ಕರೆ ನೀಡಿದ ಭಾರತ ಬಂದ್‌ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

 ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ದೇವದುರ್ಗ -ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್  ಪಕ್ಷದ ಮುಖಂಡರು, ಕಾರ್ಯಕರ್ತರು ಧರಣಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಕೇಂದ್ರದ ಎನ್‌ಡಿಎ ಸರ್ಕಾರ ಜನ ಸಾಮಾನ್ಯರ ಜೀವನ ಮಟ್ಟವನ್ನು ಪರಿಗಣಿಸಿದೆ ತೈಲ ಬೆಲೆಯನ್ನು ಏರಿಸುತ್ತಾ ಹೋಗುತ್ತಿದ್ದು, ಸಾಮಾನ್ಯ ಜನರು ಜೀವನ ನಡೆಸಲು ತೊಂದರೆ ಎದುರಾಗಿದೆ ಎಂದು ದೂರಲಾಯಿತು.

ಅಡುಗೆ ಅನಿಲ ದುಬಾರಿಯಾಗಿರುವುದರಿಂದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬದವರು ಖರೀದಿ ಮಾಡದಂಥ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಸಬೇಕು ಎಂದು ಆಗ್ರಹಿಸಲಾಯಿತು.

ಕಳೆದ ನಾಲ್ಕು ವರ್ಷದ ಹಿಂದೆಯೇ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ಶ್ರೀಮಂತರ ಪರವಾಗಿದೆ. ದೇಶದಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಇದ್ದಾರೆ ಎಂಬ ಬಗ್ಗೆ ಸಾಮಾನ್ಯ ಚಿಂತನೆ ಪ್ರಧಾನಿ ಮತ್ತು ಅವರ ಸಂಪುಟದ ಸಚಿವರಿಗೆ ಇಲ್ಲದಂತಾಗಿದೆ ಎಂದು ಆಪಾದಿಸಿದರು.

ಪಕ್ಷದ ಮುಖಂಡ ರಾಜಶೇಖರ ನಾಯಕ ಅವರು ಮಾತನಾಡಿದರು.

ಜೆಡಿಎಸ್ ಬೆಂಬಲ:

ಪ್ರತಿಭಟನೆ ಸ್ಥಳಕ್ಕೆ ಬಂದ ಜೆಡಿಎಸ್ ಪಕ್ಷದ ಮುಖಂಡರಾದ ಅಮರೇಶ ಪಾಟೀಲ, ಹನುಮಂತರಾಯ ಚಿಂತಲಕುಂಟಿ, ನಿರ್ಮಲ ನಾಯಕ, ಪುರಸಭೆ ಸದಸ್ಯರಾದ ಮುನ್ನಾಬಾಯಿ, ಹನುಮಗೌಡ ಶಂಕರಬಂಡಿ, ಶಾಲಂ ಉದ್ದಾರ್ ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದನಗೌಡ ಪಾಟೀಲ ಬುಂಕಲದೊಡ್ಡಿ, ಇಕ್ಬಾಲಸಾಬ ಹೌದೊಡ್ಡಿ, ಫಜಲುಲ್ಲಾ ಸಾಜೀದ್, ಹನುಮಂತಪ್ಪ ಕಾಕರಗಲ್, ಗುಲಾಮ ಮೈಹಿಬೂಬಸಾಬ, ಅಮರಣ್ಣಗೌಡ ಗೌರಂಪೇಟೆ, ಅಜೀಜ್ಸಾಬ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜಪ್ಪ ಬಂಡೆಗುಂಡ, ವಿಎಸ್ಎಸ್ಎನ್ ಅಧ್ಯಕ್ಷ ನಾಗರಾಜ ಪಾಟೀಲ, ಪುರಸಭೆ ಸದಸ್ಯರು ಮತ್ತು ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !