ಗುರುವಾರ , ಆಗಸ್ಟ್ 22, 2019
27 °C

ರಾಯಚೂರು | ಶಾಸಕರನ್ನು ಹುಡುಕಿ ಕೊಡಿ: ಠಾಣೆಗೆ ಜಿಲ್ಲಾ ಕಾಂಗ್ರೆಸ್‌ ದೂರು

Published:
Updated:

ರಾಯಚೂರು: ಶಾಸಕ ಪ್ರತಾಪಗೌಡ ಪಾಟೀಲ ಅವರು 10 ದಿನಗಳಿಂದ ಕಾಣೆಯಾಗಿದ್ದು, ಕೂಡಲೇ ಅವರನ್ನು ಹುಡುಕಿ ಕೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣಾ ಇರಬಗೇರಾ ಅವರು ಮಸ್ಕಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ಸಲ್ಲಿಸಿದ್ದಾರೆ.

ಪಟ್ಟಭದ್ರ ಹಿತಾಸಕ್ತಿ ಜನರು ಅವರನ್ನು ಅಪಹರಣ ಮಾಡಿ ಅಕ್ರಮವಾಗಿ ಮತ್ತು ಬಲವಂತವಾಗಿ ಕೂಡಿ ಹಾಕಿರಬಹುದು ಎನ್ನುವ ಸಂಶಯವಿದೆ. ಶಾಸಕರನ್ನು ಸಂಪರ್ಕಿಸಲು ಅನೇಕ ಬಾರಿ ಪ್ರಯತ್ನಿಸಿದರೂ ಫಲಕಾರಿಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Post Comments (+)