ಶನಿವಾರ, ಏಪ್ರಿಲ್ 1, 2023
23 °C

ರಾಯಚೂರು: ಕಾಡಿಗೆ ಮರಳಿದ 67 ಹಾವುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದ ಉರಗ ನಿಪುಣ ಅಪ್ಸರ್‌ ಹುಸೇನ್‌ ಅವರು ವಿವಿಧೆಡೆ ಜನವಸತಿಗಳಲ್ಲಿ ಸೆರೆಹಿಡಿದಿದ್ದ 67 ಹಾವುಗಳನ್ನು ಶುಕ್ರವಾರ ಮಲಿಯಾಬಾದ್‌ ಕಾಡಿಗೆ ಮರಳಿಸಿದರು.

ಹಾವುಗಳ ಕುರಿತಾಗಿ ಅರಿವು ಮೂಡಿಸುವ ಕಿರು ಕಾರ್ಯಕ್ರಮವೂ ಇದೇ ವೇಳೆ ನಡೆಯಿತು. ಶಾಸಕ ಬಸನಗೌಡ ದದ್ದಲ, ಎಪಿಎಂಸಿ ಮಾಜಿ ಅಧ್ಯಕ್ಷ ಬಸನಗೌಡ ತುರಕುನದಿನ್ನಿ, ಆನಂದ ಲೋಧಾ, ಅರಣ್ಯ ಅಧಿಕಾರಿ ರಾಜೇಶ ಇದ್ದರು.

ಫ್ರೆಂಡ್ಸ್‌ ವೈಲ್ಡ್‌ ಲೈಫ್‌ ಸೊಸೈಟಿ ಅಧ್ಯಕ್ಷರಾದ ಅಪ್ಸರ್‌ ಹುಸೇನ್‌ ಅವರು 31 ವರ್ಷಗಳಿಂದ ಹಾವುಗಳ ಕುರಿತು ಅಧ್ಯಯನ ಮಾಡುತ್ತಾ ಬಂದಿದ್ದಾರೆ. ಅವುಗಳನ್ನು ರಕ್ಷಿಸಿ, ಕಾಡಿಗೆ ಬಿಡುವುದರ ಜೊತೆಗೆ ಹಾವುಗಳ ಮಹತ್ವ ಮತ್ತು ಜನರಲ್ಲಿರುವ ಭಯ ನಿವಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಡಿಯೋಗ್ರಾಫರ್‌ ರಹೀಂ, ಉರಗ ಸಂರಕ್ಷಕರಾದ ಸೋಹೆಲ್‌, ಆಶರ್‌ ಹುಸೇನ್‌, ಉದಯ, ಮುಕ್ತಿಯಾರ್‌, ಖಾಜಾ, ಆಶೀಪ್‌ ಇದ್ದರು. ಜನವಸತಿಗಳಲ್ಲಿ ಹಾವು ಕಂಡುಬಂದರೆ 9900127861 ಸಂಖ್ಯೆಗೆ ಕರೆ ಮಾಡಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು