ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ಜಿಲ್ಲೆಯಲ್ಲಿ 9 ಮಿಲಿಮೀಟರ್ ಮಳೆ

Last Updated 14 ಸೆಪ್ಟೆಂಬರ್ 2020, 14:14 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೂ 9 ಮಿಲಿಮೀಟರ್‌ ಮಳೆಯಾಗಿದ್ದು, ವಾಡಿಕೆ ಮಳೆ 4 ಮಿಲಿಮೀಟರ್‌ಗಿಂತಲೂ ಅಧಿಕವಾಗಿದೆ.

ಮಾನ್ವಿ ಮತ್ತು ಸಿರವಾರ ತಾಲ್ಲೂಕುಗಳಲ್ಲಿ ತಲಾ 10, ರಾಯಚೂರು ತಾಲ್ಲೂಕಿನಲ್ಲಿ 13, ದೇವದುರ್ಗ ತಾಲ್ಲೂಕಿನಲ್ಲಿ 8, ಲಿಂಗಸುಗೂರು ಮತ್ತು ಸಿಂಧನೂರು ತಾಲ್ಲೂಕಿಗಳಲ್ಲಿ ತಲಾ 6, ಮಸ್ಕಿಯಲ್ಲಿ 7 ಮಿಲಿಮೀಟರ್‌ ಮಳೆಯಾಗಿದೆ.

ಸೆಪ್ಟೆಂಬರ್‌ 1 ರಿಂದ 14 ರವರೆಗೂ ಜಿಲ್ಲೆಯಲ್ಲಿ ಶೇ 28 ರಷ್ಟು ಅಧಿಕ ಮಳೆ ಸುರಿದಿದೆ. ವಾಡಿಕೆ ಮಳೆ 54 ಮಿಲಿಮೀಟರ್‌ ಬದಲು 69 ಮಿಲಿಮೀಟರ್‌ ಮಳೆ ಬಿದ್ದಿದೆ. ರಾಯಚೂರು ಮತ್ತು ದೇವದುರ್ಗ ತಾಲ್ಲೂಕುಗಳಲ್ಲಿ ಮಾತ್ರ ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT