ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನದಲ್ಲಿ ಬೇಡಜಂಗಮರ ಪರ ಧ್ವನಿ ಎತ್ತಲು ಮನವಿ

Last Updated 11 ಸೆಪ್ಟೆಂಬರ್ 2022, 12:39 IST
ಅಕ್ಷರ ಗಾತ್ರ

ಲಿಂಗಸುಗೂರು: ವಿಧಾನಸಭೆ ಅಧಿವೇಶನದಲ್ಲಿ ಬೇಡಜಂಗಮರ ಸತ್ಯಪ್ರತಿಪಾದನ ಹೋರಾಟ ಹಾಗೂ ಜಾತಿಪ್ರಮಾಣ ಪತ್ರ ನೀಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಧ್ವನಿ ಎತ್ತಬೇಕು ಎಂದು ಬೇಡ ಜಂಗಮ ಮುಖಂಡರು ಮನವಿ ಸಲ್ಲಿಸಿದರು.

ಭಾನುವಾರ ಶಾಸಕಡಿ.ಎಸ್‍ ಹೂಲಗೇರಿ ಆಪ್ತ ಸಹಾಯಕ ಶರಣಬಸವ, ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಭೂಪನಗೌಡ ಕರಡಕಲ್ಲ ಅವರಿಗೆ ಮನವಿ ಸಲ್ಲಿಸಿ, 73 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೆಡಜಂಗಮ ಒಕ್ಕೂದ ಅಧ್ಯಕ್ಷ ಬಿ.ಡಿ ಹಿರೇಮಠ ನೇತೃತ್ವದಲ್ಲಿ ಸತ್ಯಪ್ರತಿಪಾದನ ಹೋರಾಟ ಅನಿರ್ಧಿಷ್ಟಾವಧಿ ನಡೆಯುತ್ತಿದೆ. ಪರಿಶಿಷ್ಟ ಜಾತಿ, ಪಂಗಡದ ಸದಸ ಸಮಿತಿ ಸದಸ್ಯರಾದ ತಾವು ಬೇಟಿ ನೀಡಬೇಕು ಗಮನ ಸೆಳೆದರು.

ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ಸರ್ಕಾರದ ಅಧಿಕೃತ ದಾಖಲೆ, ನ್ಯಾಯಾಲಯ ಆದೇಶ ಪ್ರತಿಗಳ ಮುಂದಿಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಮುಖ್ಯಮಂತ್ರಿ, ಸಮಾಜಕಲ್ಯಾಣ, ಕಂದಾಯ ಸೆರಿದಂತೆ ಇತರೆ ಸಚಿವರು, ಪಟ್ಟಭದ್ರ ಹಿತಾಸಕ್ತಿ ಶಾಸಕರ ಮನವರಿಕೆ ಮಾಡಿಕೊಡಬೇಕು. ಈ ನಿಟ್ಟಿನಲ್ಲಿ ಹಿಂದೇಟು ಹಾಕಿದಲ್ಲಿ ಮುಂದಿನ ಚುನಾವಣೆಯಲ್ಲಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಘಟಕ ಅಧ್ಯಕ್ಷ ಪ್ರಭುಸ್ವಾಮಿ ಅತ್ನೂರು, ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಹಿರೇಮಠ. ಮುಖಂಡರಾದ ಜಂಬಯ್ಯ, ಮಹಾದೇವಯ್ಯ, ಶಿವಕುಮಾರ, ನಾಗಯ್ಯ ಸೊಪ್ಪಿಮಠ, ಬಸಯ್ಯಸ್ವಾಮಿ, ಚಂದ್ರಶೇಖರಯ್ಯ, ವೀರಭದ್ರಯ್ಯ, ಘನಮಠದಯ್ಯ, ವಿರುಪಾಕ್ಷಯ್ಯ, ಮಹಾಂತೇಶ, ಬಸವರಾಜ, ಸಂಗಯ್ಯ, ಸಂಗಮೇಶ, ಮಲ್ಲಯ್ಯ, ಮಹೇಶ, ಅಮರೇಶ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT