ಶನಿವಾರ, ಜನವರಿ 16, 2021
24 °C

ಗ್ರಾಮೀಣ ಸಾರಿಗೆ ವ್ಯವಸ್ಥೆಗೆ ಎಬಿವಿಪಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ಈಗಾಗಲೆ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಆದಾಗ್ಯೂ ಕೂಡ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶಗಳಿಗೆ ನಿಗದಿತ ಅವಧಿ ಆಧರಿಸಿ ಗ್ರಾಮೀಣ ಪ್ರದೇಶಗಳಿಗೆ ಬಸ್‍ ಓಡಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕಾರ್ಯಕರ್ತರು ಆಗ್ರಹಿಸಿದರು.

ಗುರುವಾರ ಸಾರಿಗೆ ಸಂಸ್ಥೆ ಅಧಿಕಾರಿ ಶಿವನಗೌಡ ಅವರಿಗೆ ಮನವಿ ಸಲ್ಲಿಸಿದ ಅವರು, ಶಾಲಾ ಕಾಲೇಜು ಆರಂಭಗೊಂಡು ತಿಂಗಳು ಆದರು ಬಸ್‍ ವ್ಯವಸ್ಥೆ ಸರಿ ಹೋಗಿಲ್ಲ. ಬಸ್‍ಪಾಸ್‍ ಸೌಲಭ್ಯ ನೀಡದೆ ಹೋಗಿದ್ದರಿಂದ ವಿದ್ಯಾರ್ಥಿಗಳು ಹಣ ಪಾವತಿಸಿ ಕಾಲೇಜಿಗೆ ಬಂದು ಹೋಗಲು ಪರದಾಡುವಂತಾಗಿದ್ದು ಕೂಡಲೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದರು.

ಎಬಿವಿಪಿ ಜಿಲ್ಲಾ ಸಂಚಾಲಕ ಹೇಮಂತ. ಮುಖಂಡರಾದ ವಿಠಲ ಹುನಗುಂದ, ನೂರಜಾ, ಶಿಲ್ಪಾ, ಭವಾನಿ, ಈರಮ್ಮ, ಚೆನ್ನಮ್ಮ, ಯಲ್ಲಮ್ಮ, ನಾಗರತ್ನ, ಶಿವಮ್ಮ, ಶಿವರಾಜ, ಹನುಮಂತ, ಶಶಿಕುಮಾರ, ವೆಂಕಟೇಶ, ಉದಯಕುಮಾರ, ಸಂತೋಷ, ಬಸವರಾಜ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು