ಗೋ ರಕ್ಷಕರ ನೈತಿಕ ಪೊಲೀಸ್‌ಗಿರಿ ತಡೆಯಲು ಆಗ್ರಹ

7

ಗೋ ರಕ್ಷಕರ ನೈತಿಕ ಪೊಲೀಸ್‌ಗಿರಿ ತಡೆಯಲು ಆಗ್ರಹ

Published:
Updated:

ರಾಯಚೂರು: ಗೋ ರಕ್ಷಣೆಯ ಮೇಲಿರುವ ಕಪಟ ಪ್ರೀತಿಯನ್ನು ನೆಪವಾಗಿಸಿಕೊಂಡು ಮನುಷ್ಯರನ್ನು ದ್ವೇಷಿಸುವ ದುಷ್ಟಶಕ್ತಿಗಳ ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾ (ಡಬ್ಲುಪಿಐ) ಆಗ್ರಹಿಸಿದೆ.

ಡಬ್ಲುಪಿಐ ತಾಲ್ಲೂಕು ಘಟಕದ ಪದಾಧಿಕಾರಿಗಳು ಲಿಂಗಸುಗೂರು ತಾಲ್ಲೂಕು ತಹಸೀಲ್ದಾರ್‌ರಿಗೆ ಮಂಗಳವಾರ ಈ ಸಂಬಂಧ ಮನವಿ ಸಲ್ಲಿಸಿದರು.
ಗೋ ರಕ್ಷಣೆ ಹೆಸರಿನಲ್ಲಿ ನಿರ್ದಿಷ್ಟ ಸಮುದಾಯದ ವ್ಯಕ್ತಿಗಳನ್ನು ಗುರುತಿಸಿ ಹಿಂಸಿಸುವುದು, ಕೊಲೆ ಮಾಡುವುದು ಸೇರಿದಂತೆ ದೇಶದಾದ್ಯಂತ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತ ಸಾಗಿವೆ. ಇಂತಹ ಗುಂಡಾ ಸಂಸ್ಕೃತಿಗೆ ನಡೆಸುವ ಪಟ್ಟಭದ್ರ ಹಿತಾಸಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !