ಕೃಷಿ ಸಂಸ್ಕರಣಾ ಯೋತ್ರೋಪಕರಣಗಳ ಪ್ರಾತ್ಯಕ್ಷಿಕೆ

7

ಕೃಷಿ ಸಂಸ್ಕರಣಾ ಯೋತ್ರೋಪಕರಣಗಳ ಪ್ರಾತ್ಯಕ್ಷಿಕೆ

Published:
Updated:
Deccan Herald

ರಾಯಚೂರು: ತಾಲ್ಲೂಕಿನ ಚಂದ್ರಬಂಡಾದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್. (ಕೃಷಿ ತಾಂತ್ರಿಕ) ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಚಟುವಟಿಕಾ ಅನುಭವ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಈಚೆಗೆ ಆರಂಭಿಸಿದರು.

ಅಕ್ಟೋಬರ್‌ 7 ರವರೆಗೂ ವಾಸ್ತವ್ಯ ಇರಲಿದ್ದಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ತರಗತಿಗಳಲ್ಲಿ ಕಲಿತ ವಿಷಯಗಳನ್ನು ಪ್ರಾಯೋಗಿಕವಾಗಿ ರೈತರ ಜೊತೆಗೂಡಿ ಮನನ ಮಾಡಿಕೊಳ್ಳುವರು. ಸಮಗ್ರ ಕೃಷಿ ಅಭಿವೃದ್ದಿಗೆ ವಿವಿಧ ತಾಂತ್ರಿಕತೆಗಳು ಹಾಗೂ ವಿಶ್ವವಿದ್ಯಾಲಯದ ವತಿಯಿಂದ ಅಭಿವೃದ್ದಿಗೊಳಿಸಲಾಗಿರುವ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಮುಟ್ಟಿಸುವ ಕೆಲಸ ಮಾಡಲಿದ್ದಅರೆ.

ಗ್ರಾಮದಲ್ಲಿ ವಿದ್ಯಾರ್ಥಿಗಳು ಸ್ವಚ್ಛಭಾರತ ಅಭಿಯಾನ, ಯೋಗ-ಧ್ಯಾನ ಶಿಭಿರ, ಸಸಿ ನೆಡುವ ಕಾರ್ಯಕ್ರಮ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ, ಅಳಿಸಲಾಗದ ಶಕ್ತಿಮೂಲಗಳ ಅವಕಾಶಗಳು ಮುಂತಾದ ವಿಷಯವಾಗಿ ಪ್ರಾತ್ಯಕ್ಷಿಕೆ ಕಾರ್ಯಚಟುವಟಿಕೆಗಳನ್ನು ಮಾಡುವರು. ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಮಾಡುವ ಮೂಲಕ ಗ್ರಾಮಸ್ಥರಿಗೆ ಕೃಷಿ ಉತ್ಪನ್ನಗಳ ನಷ್ಟ ತಡೆಗಟ್ಟಲು ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಇರುವ ಅವಕಾಶಗಳು ಹಾಗೂ ಅದರಿಂದಾಗುವ ಲಾಭದ ವಿಷಯವಾಗಿ ರೈತರಿಗೆ ಮನದಟ್ಟುಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.

ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪಿ.ಎಫ್.ಮಠದ ಅವರ ಮಾರ್ಗದರ್ಶನದಲ್ಲಿ ವಾಸ್ತವ್ಯವನ್ನು ವಿದ್ಯಾರ್ಥಿಗಳು ಕೈಗೊಂಡಿದ್ದಾರೆ. ಒಟ್ಟು 42 ದಿನಗಳವರೆಗಿನ ವಾಸ್ತವ್ಯ ಇದಾಗಿದೆ.

ಕಾಲೇಜಿನ ಡೀನ್‌ ಡಾ. ವೀರನಗೌಡ ಅವರ ಮಾರ್ಗದರ್ಶನದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಮಪ್ಪ, ಕೆ.ಟಿ. ಮತ್ತು ಇಂ. ರೂಪಾಬಾಯಿ ಅವರು ನೇತೃತ್ವ ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !