ಕೋಲ್ಕತ್ತದಲ್ಲಿ ಪ್ರತಿಮೆ ಧ್ವಂಸ: ಎಐಡಿಎಸ್‌ಒ ಖಂಡನೆ

ಸೋಮವಾರ, ಮೇ 27, 2019
29 °C

ಕೋಲ್ಕತ್ತದಲ್ಲಿ ಪ್ರತಿಮೆ ಧ್ವಂಸ: ಎಐಡಿಎಸ್‌ಒ ಖಂಡನೆ

Published:
Updated:
Prajavani

ರಾಯಚೂರು: ಕೋಲ್ಕತ್ತದಲ್ಲಿ ಈಚೆಗೆ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆ ಧ್ವಂಸ ಮಾಡಿರುವ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿ ಎಐಡಿಎಸ್‌ಒ ಮತ್ತು ಎಐಎಂಎಸ್‌ಎಸ್‌ ನೇತೃತ್ವದಲ್ಲಿ ನಗರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಮಹಾತ್ಮರ ಪ್ರತಿಮೆಗಳನ್ನು ಧ್ವಂಸಗೊಳಿಸಿ ಸಂಭ್ರಮಿಸುವ ಕಿಡಿಗೇಡಿಗಳ ಪಡೆಯೊಂದು ಈಚೆಗೆ ದೇಶದಲ್ಲಿ ಹುಟ್ಟುಕೊಂಡಿದೆ. ಕಿಡಿಗೇಡಿಗಳು ಮಹಾತ್ಮರ ಪ್ರತಿಮೆಗಳನ್ನು ಧ್ವಂಸ ಮಾಡಬಹುದು, ಆದರೆ ಅವರ ವಿಚಾರಗಳನ್ನು ನಾಶಗೊಳಿಸಲು ಸಾಧ್ಯವಿಲ್ಲ. ದೇಶದಲ್ಲಿ ಕಾನೂನಿನ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರವು ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಕಠಿಣ ಕಾನೂನು ಜರುಗಿಸುವುದು ಅವಶ್ಯಕವಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !