ಬುಧವಾರ, ಮಾರ್ಚ್ 22, 2023
19 °C
₹ 1 ಕೋಟಿ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಸಕಾಲಕ್ಕೆ ಕಾಮಗಾರಿ ಮುಗಿಸಿ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಸಿಂಧನೂರಿನ ಇಂದಿರಾನಗರದಲ್ಲಿರುವ ಕರಿಯಪ್ಪ ಲೇಔಟ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ₹ 1 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಾಸಕ ವೆಂಕಟರಾವ್ ನಾಡಗೌಡ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಬೇಡ್ಕರ್ ಭವನದ ಕಟ್ಟಡ ನಿರ್ಮಾಣಕ್ಕೆ ₹ 2 ಕೋಟಿ ಪ್ರಸ್ತಾವ ಸಲ್ಲಿಸಲಾಗಿದ್ದು, ಮೊದಲನೇ ಹಂತವಾಗಿ ₹ 1 ಕೋಟಿ ಅನುದಾನ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಕೋಟಿ ಹಣ ಬರಲಿದ್ದು, ಸಮರ್ಪಕವಾಗಿ ಬಳಸಿಕೊಂಡು ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಟ್ಟಡವನ್ನು ಕಾಷುಟೆಕ್ ಕಂಪನಿಯವರು ನಿರ್ಮಿಸಿ ನಗರಸಭೆಗೆ ಹಸ್ತಾಂತರಿಸಬೇಕು. ಸಮಾಜದವರು ಸಮಿತಿ ರಚಿಸಿಕೊಂಡು ಕಟ್ಟಡದ ಬಗ್ಗೆ ನಿಗಾವಹಿಸಿ, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಾಲಿಂಗಪ್ಪ, ಕಾಷುಟೆಕ್ ಜೆಇ ಕೌಸರ್, ಮುಖಂಡ ರಾದ ಯಮನಪ್ಪ ಮಲ್ಲಾಪುರ, ಎಂ.ಡಿ.ನದೀಮ್ ಮುಲ್ಲಾ, ಕೆ.ಛತ್ರಪ್ಪ, ಚಂದ್ರಶೇಖರ ಮೈಲಾರ, ನಿರುಪಾದಿ ನಾಗಲಾಪೂರ, ಲಿಂಗರಾಜ ಹೂಗಾರ್, ಇಲಿಯಾಜ್ ಪಟೇಲ್, ಮಹಾದೇವ ಧುಮತಿ, ಬಸವರಾಜ ಬಡಿಗೇರ್, ಶರಣಪ್ಪ ಗಿಣಿವಾರ, ಗುರುರಾಜ ಮುಕ್ಕುಂದಾ, ಹನುಮಂತ ಹಂಚಿನಾಳ, ಹನುಮಂತ ಬೂದಿವಾಳ ವಕೀಲ, ನಿರುಪಾದಿ ಸಾಸಲಮರಿ, ಶರಣಬಸವ ಮಲ್ಲಾಪುರ, ಭೀಮೇಶ ಕವಿತಾಳ, ದುಗುರಪ್ಪ ಬಾಲಿ, ಸೈಯ್ಯದ್ ಆಸೀಫ್, ಮಲ್ಲಿಕಾರ್ಜುನ ಜೀನೂರು, ರಾಮಣ್ಣ ಸಾಸಲಮರಿ, ಜಕ್ಕರಾಯ, ಪಂಪಾಪತಿ, ಬಾಬಾಖಾನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.