ಗುರುವಾರ , ಡಿಸೆಂಬರ್ 3, 2020
23 °C

ಸ್ನಾನಘಟ್ಟಕ್ಕೆ ಅವಕಾಶ ನೀಡದ ಆಂಧ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ತುಂಗಭದ್ರ ಪುಷ್ಕರ ಮೇಳಕ್ಕಾಗಿ ಸ್ನಾನಘಟ್ಟಗಳನ್ನು ಸ್ಥಾಪಿಸ ಬಾರದು ಎಂದು ಆಂಧ್ರಪ್ರದೇಶ ಸರ್ಕಾರ ಸೂಚಿಸಿದ ಹಿನ್ನೆಲೆಯಲ್ಲಿ ಸ್ನಾನಕ್ಕೆ ಪರ್ಯಾಯವಾಗಿ ತಾತ್ಕಾಲಿಕ ಸ್ನಾನಗೃಹ ಅಥವಾ ಸಿಂಪಡಣೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕರ್ನೂಲ್ ಜಿಲ್ಲಾಡಳಿತವು ಮಂತ್ರಾಲಯ ಮಠಕ್ಕೆ ತಿಳಿಸಿದೆ. 

ಪುಷ್ಕರಕ್ಕಾಗಿ ಮಂತ್ರಾಲಯ ಮಠವು ತುಂಗಭದ್ರಾ ನದಿಯಲ್ಲಿ ಸ್ನಾನಘಟ್ಟ ನಿರ್ಮಿಸಿತ್ತು. ಮಂತ್ರಾಲಯದಲ್ಲಿ ಸ್ನಾನ ಘಟ್ಟದ ವ್ಯವಸ್ಥೆ ಮಾಡಿರುವ ಕಡೆ ಆಂಧ್ರಪ್ರದೇಶ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಹಿಂದೂ ಸಂಪ್ರದಾಯದಂತೆ ನದಿಯಲ್ಲಿ ಪಿಂಡಪ್ರದಾನ, ತರ್ಪಣ ಹಾಗೂ ಸ್ನಾನಕ್ಕೆ ಅವಕಾಶ ಮಾಡಬೇಕು ಎಂದು ಕರ್ನೂಲ್ ಜಿಲ್ಲಾಡಳಿತಕ್ಕೆ ಅಲ್ಲಿನ ವಿಶ್ವ ಹಿಂದೂ ಪರಿಷತ್ ಘಟಕವು ಒತ್ತಾಯಿಸಿದೆ. 'ಪುಷ್ಕರ ಮೇಳ ನಡೆಯುವ ದಿನಗಳಲ್ಲಿಮಠ ದಲ್ಲಿ ರಾಯರ ದರ್ಶನಕ್ಕಾಗಿ ಭಕ್ತರಿಗೆ ಅನು ಕೂಲ ಕಲ್ಪಿಸುವ ವ್ಯವಸ್ಥೆ ಯನ್ನು ಶ್ರೀಗಳು ಮಾಡಿದ್ದಾರೆ. ನದಿಸ್ನಾನಕ್ಕೆ ಸಂಬಂಧಿಸಿ ದಂತೆ ಭಕ್ತರು ಆಂಧ್ರ ಪೊಲೀಸರ ಸೂಚನೆ ಅನುಸರಿಸಬೇಕಾಗುತ್ತದೆ. ಸಂಪ್ರದಾಯ ಪಾಲನೆಗಾಗಿ ಸ್ನಾನದ ವೇಳೆ ಕೆಲ ಸಡಿಲಿಕೆಗಳನ್ನು ಮಾಡುವಂತೆ ಕರ್ನೂ ಲ್ ಜಿಲ್ಲಾಡಳಿತಕ್ಕೆ ಮಂತ್ರಾಲಯ ಶ್ರೀ ಕೇಳಿದ್ದಾರೆ. ಗುರುವಾರ ಸಂಜೆ ವೇಳೆಗೆ ಈ‌ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ನಿರ್ದೇಶನ ಬರಬಹುದು' ಎಂದು ಮಂತ್ರಾಲಯ ಮಠದ ಮಾಧ್ಯಮ ಸಂಯೋಜಕ ಶ್ರೀನಿವಾಸ ರಾವ್ ಎಸ್.ಕೆ‌ ‘ಪ್ರಜಾವಾಣಿ’ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.