ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಣ್ ಟ್ರ್ಯಾಕರ್ ಎಫ್ ನಿರ್ಧಾರ ಹಿಂಪಡೆಯಲು ಒತ್ತಾಯ

Last Updated 9 ಏಪ್ರಿಲ್ 2021, 14:57 IST
ಅಕ್ಷರ ಗಾತ್ರ

ರಾಯಚೂರು: ಪೋಷಣ್ ಟ್ರ್ಯಾಕರ್ ಎಫ್‌ಗೆ ಅಂಗನವಾಡಿ ಕಾರ್ಯಕರ್ತೆಯರ ವೇತನ ಪಾವತಿ ಮಾಡುವ ಕುರಿತು ಕೈಗೊಂಡ ಸರ್ಕಾರದ ನಿರ್ಧಾರ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಮಹಿಳಾ ಮತ್ತು ಮಹಿಳಾ ಅಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದರು.

ಪೋಷಣ್ ಟ್ರ್ಯಾಕರ್ ಎಫ್ ಕೊಂಡಿಗೆ ಅಂಗನವಾಡಿ ಕಾರ್ಯಕರ್ತೆಯರ ಮಾರ್ಚ್‌ ತಿಂಗಳ ಗೌರವಧನ ಅಳವಡಿಸಲಾಗುವುದು. ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಂದ ಎಲ್ಲಾ ದತ್ತಾಂಶಗಳ ನಮೂದಿಸುವಿಕೆಯನ್ನು ತ್ವರಿತವಾಗಿ ಮಾಡಿಸಬೇಕು. ಈ ವ್ಯವಸ್ಥೆ ಮೂಲಕ ಆಹಾರ ಧಾನ್ಯ ತ್ರೈಮಾಸಿಕ ಹಂಚಿಕೆ ಮಾಡಲಾಗುವುದು ಎಂದು ಸರ್ಕಾರ ಹೇಳಿದ್ದು ಅಂಗನವಾಡಿ ಕಾರ್ಯಕರ್ತೆಯರಿಗೆ ದಿಭ್ರಮೆಗೊಳಿಸಿದೆ. ಈ ಪದ್ದತಿ ರಾಜ್ಯ ಸರ್ಕಾರ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.

ಮೂಲಸೌಕರ್ಯ ಅಭಿವೃದ್ಧಿಗೆ ಗುಣಮಟ್ಟದ ಪೋಷಕಾಂಶಕ್ಕೆ ಸರಿಯಾದ ತರಬೇತಿ ಐಸಿಡಿಎಸ್‌ಗೆ ಹಣಕಾಸು ಹಂಚಿಕೆಯನ್ನು ಸರ್ಕಾರ ಖಾತ್ರಿ ಪಡಿಸಬೇಕು ಹಾಗೂ ಕಡಿತವಾಗಿರುವ ಬಜೆಟ್ ಹಂಚಿಕೆ ಎಲ್ಲಾ ರಾಜ್ಯಗಳಿಗೆ ಕೊಡಬೇಕು. ಐಸಿಡಿಎಸ್ ಯೋಜನೆಯಡಿಯಲ್ಲಿ ಕೆಲಸದ ಹೊರೆಯನ್ನು ಕಡಿಮೆ ಮಾಡುವ ದಕ್ಷತೆ ಹೆಚ್ಚಿಸುವ ತಂತ್ರಜ್ಞಾನ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಎಚ್. ಪದ್ಮಾ, ತಾಲ್ಲೂಕು ಕಾರ್ಯದರ್ಶಿ ಪಾರ್ವತಿ ಮನ್ಸಲಾಪೂರು, ಗೌರಮ್ಮ, ಗಂಗಮ್ಮ, ಆದಿಲಕ್ಷ್ಮೀ, ಅಸ್ಮಾ, ಮಹಾದೇವಿ, ಟಿ. ಶಾರದಾ, ಭಾಗ್ಯಲಕ್ಷ್ಮಿ, ಗೀತಾಂಜಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT