5 ರಿಂದ ಪಶು ಮತ್ತು ಮತ್ಸ್ಯಮೇಳ

7

5 ರಿಂದ ಪಶು ಮತ್ತು ಮತ್ಸ್ಯಮೇಳ

Published:
Updated:

ರಾಯಚೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯಿಂದ ಜನವರಿ 5ರಿಂದ 7ರವರೆಗೆ ರಾಜ್ಯ ಮಟ್ಟದ ಪಶು ಮತ್ತು ಮತ್ಸ್ಯಮೇಳವನ್ನು ಜಿಲ್ಲೆಯ ಸಿಂಧನೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

5 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಸಂಸದರಾದ ಸಂಗಣ್ಣ ಕರಡಿ, ಬಿ.ವಿ.ನಾಯಕ, ಶಾಸಕರಾದ ಪ್ರತಾಪಗೌಡ ಪಾಟೀಲ್, ಎನ್.ಎಸ್.ಬೋಸರಾಜು, ಕೆ.ಶಿವನಗೌಡ ನಾಯಕ, ಡಾ.ಶಿವರಾಜ್ ಪಾಟೀಲ್, ಬಸವರಾಜ್ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರು, ಡಿ.ಎಸ್.ಹೂಲಗೇರಿ, ರಾಜಾ ವೆಂಕಟಪ್ಪ ನಾಯಕ, ಬಸನಗೌಡ ದದ್ದಲ್, ಚಂದ್ರಶೇಖರ ಪಾಟೀಲ್ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 4 ಗಂಟೆಗೆ ಹೈನುರಾಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ, 6ರಂದು ಬೆಳಿಗ್ಗೆ 7ಗಂಟೆಗೆ ಮತ್ತು ಸಂಜೆ 4ಗಂಟೆಗೆ ಹೈನುರಾಸುಗಳಲ್ಲಿ ಹಾಲು ಕರೆಯುವ ಅಂತಿಮ ಸ್ಪರ್ಧೆ ಮತ್ತು ಬೆಳಿಗ್ಗೆ 10 ಗಂಟೆಗೆ ಶ್ವಾನಗಳ ಪ್ರದರ್ಶನ, 7ರಂದು ಬೆಳಿಗ್ಗೆ 10ಗಂಟೆಗೆ ಜಾನುವಾರುಗಳು ಮತ್ತು ಕರುಗಳ ಪ್ರದರ್ಶನ ನಡೆಯಲಿದೆ.

ಆಕ್ಷೇಪಣೆ ಸಲ್ಲಿಸಲು ಸೂಚನೆ
ರಾಯಚೂರು: ಮಾನ್ವಿ ಪುರಸಭೆ ವ್ಯಾಪ್ತಿಯಲ್ಲಿ ಘನತಾಜ್ಯ ನಿರ್ವಹಣೆ 2016ರ ನಿಯಮಗಳ ಪ್ರಕಾರ ಪರಿಸರ ಹಾಳು ಮಾಡುವ, ನೈರ್ಮಲ್ಯಕ್ಕೆ ಧಕ್ಕೆ ಉಂಟು ಮಾಡುವ ಕೃತ್ಯಗಳನ್ನು ನಿಯಂತ್ರಿಸಲು ದಂಡವಿಧಿಸಲು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿರುವುದರಿಂದ ಅನೈರ್ಮಲ್ಯ ಕೃತ್ಯಗಳಿಗೆ ದಂಡವನ್ನು ನಿಗಧಿಪಡಿಸಲಾಗಿದೆ. ಆಕ್ಷೇಪಣೆ ಹಾಗೂ ಸಲಹೆಗಳನ್ನು ಲಿಖಿತವಾಗಿ ಕಚೇರಿಗೆ 30 ದಿನಗಳಲ್ಲಿ ಸಲ್ಲಿಸಬಹುದು.

ಸಾಧಕರೊಂದಿಗೆ ಸಂವಾದ ಇಂದು
ರಾಯಚೂರು:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾರಾನಾಥ ಶಿಕ್ಷಣ ಸಂಸ್ಥೆ ಮತ್ತು ಎಲ್‌ವಿಡಿ ಕಾಲೇಜಿನಿಂದ ಸಾಧಕರೊಂದಿಗೆ ಸಂವಾದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ, ಹಿಂದೂಸ್ತಾನಿ ಗಾಯಕ ಮುದ್ದುಮೋಹನ ಜೀವನ ಮತ್ತು ಸಾಧನೆ ಕುರಿತು ವಿಚಾರ ಸಂಕಿರಣವನ್ನು ಜನವರಿ 3ರಂದು ಬೆಳಿಗ್ಗೆ 10ಗಂಟೆಗೆ ಎಲ್‌ವಿಡಿ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಧೀಶ ಎಂ.ಮಹಾದೇವಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಮಸ್ಕಿ ನಾಗರಾಜ, ಪವನ್ ಸುಖಾಣಿ, ರಾಮ್ ಬೂಬ್, ಮಹಾಂತೇಶ ಮಸ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುದ್ದುಮೋಹನ ಉಪಸ್ಥಿತಿ ಇರುತ್ತಾರೆ.

ಮುದ್ದುಮೋಹನರ ಜೀವನ ಕುರಿತು ಅಂತರರಾಷ್ಟ್ರೀಯ ಕ್ಲಾರಿಯೋನೆಟ್ ಕಲಾವಿದ ಪಂ.ನರಸಿಂಹಲು ವಡವಾಟಿ ಮಾತನಾಡಲಿದ್ದಾರೆ. ಸಾಧನೆಗಳು ಹಾಗೂ ಒಡನಾಟದ ಕುರಿತು ನಿವೃತ್ತ ಪ್ರಾಚಾರ್ಯ ಸ್ವಾಮಿರಾವ್ ಕುಲಕರ್ಣಿ ಮಾತನಾಡಲಿದ್ದಾರೆ.

12ರಿಂದ 14ರವರೆಗೆ ವಿಶೇಷ ಬಸ್ ವ್ಯವಸ್ಥೆ
ರಾಯಚೂರು:
ಯರಗೇರಾ ಗ್ರಾಮದ ಹಜರತ್ ಬಡೇಸಾಬ್ ಉರುಸು ಜನವರಿ 12ರಿಂದ 14ರವರೆಗೆ ನಡೆಯಲಿದ್ದು, ಭಕ್ತರ ಸೌಕರ್ಯಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್ ವ್ಯವಸ್ಥೆ ಒದಗಿಸಲಾಗಿದೆ.

ಯರಗೇರಾ-ಇಡಪನೂರು- ತಲ್ಮಾರಿ, ಯರಗೇರಾ-ಗುಂಜಳ್ಳಿ, ಗಿಲ್ಲೇಸೂಗೂರು, ರಾಯಚೂರು, ಮಾಸದೊಡ್ಡಿ, ಯರಗೇರಾ, ಯರಗೇರಾ-ಐಜ್ ಮತ್ತು ಯರಗೇರಾ-ಗುಂಜಳ್ಳಿ-ಉಪ್ರಾಳ-ಮಟಮಾರಿ ಮಾರ್ಗದಲ್ಲಿ ವಿಶೇಷ ಬಸ್‌ಗಳು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !