ಅರಕೇರಾ (ದೇವದುರ್ಗ): ‘ಮುಟ್ಟು ಮೈಲಿಗೆಯಲ್ಲ. ಋತುಚಕ್ರದಿಂದ ಮನುಕುಲಕ್ಕೆ ಜನ್ಮ’ ಎಂದು ವೈದ್ಯ ಡಾ.ಬನರಾಜ ಹೇಳಿದರು.

ಪಟ್ಟಣದಲ್ಲಿ ಆರೋಗ್ಯ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಕೆಎಚ್ಪಿಟಿ ವತಿಯಿಂದ ಶನಿವಾರ ನಡೆದ ಅಂತರರಾಷ್ಟ್ರೀಯ ಋತುಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಋತುಚಕ್ರ ಇರುವುದರಿಂದಲೇ ಈ ಮನುಕುಲ ಮುಂದುವರಿಯುತ್ತಿದೆ. ಆದ್ದರಿಂದ ಮುಟ್ಟು ಎಂಬುದು ಸಂಭ್ರಮದ ವಿಷಯ. ಮನೆಯ ಹೆಂಗಸರು ಮುಟ್ಟು ಮುಂದೂಡುವ ಮಾತ್ರೆ ತೆಗೆದುಕೊಳ್ಳದಂತೆ ಪುರುಷರೂ ಜವಾಬ್ದಾರಿ ವಹಿಸಬೇಕು. ಮಹಿಳೆಯ ಕೆಲಸಗಳ ಜವಾಬ್ದಾರಿ ವಹಿಸಿ ಮೂರು ದಿನಗಳ ಕಾಲ ತುಸು ವಿಶ್ರಾಂತಿ ಸಿಗುವಂತೆ ಮಾಡುವ ಕರ್ತವ್ಯ ಪುರುಷರ ಹೆಗಲ ಮೇಲಿದೆ’ ಎಂದರು.

ಪಿಡಿಒ ವೆಂಕೋಬ ನಾಯಕ ಮಾತನಾಡಿ,‘ಜನ ಮೌಢ್ಯದಿಂದ ಹೊರಬರಬೇಕು. ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಹೆಚ್ಚಬೇಕು. ಮುಟ್ಟು ಮುಂದೂಡುವುದು ಎಂದರೆ ಪ್ರಕೃತಿ ಸಹಜ ಹಾರ್ಮೊನ್ಗಳಿಗೆ ತಡೆ ಹಾಕಿದಂತೆ. ಅದರಿಂದ ದೇಹದ ಮೇಲೆ ಮಾತ್ರವಲ್ಲ, ಮಾನಸಿಕತೆಯ ಮೇಲೆಯೂ ಪರಿಣಾಮ ಉಂಟಾಗಲಿದೆ’ ಎಂದು ಹೇಳಿದರು.

ಸ್ನೇಹಾ ಕಿನ್ಲಿಕ್ನ ಆಪ್ತ ಸಮಾಲೋಚಕ ಹಾಗೂ ಜಿಲ್ಲಾ ಸಂಯೋಜಕ ಶಿವಯೋಗಿ ಮಠಪತಿ, ಕ್ರೈ ಸಂಸ್ಥೆ ತಾಲ್ಲೂಕು ಸಂಯೋಜಕ ರಾಮಣ್ಣ ಎನ್.ಗಣೇಕಲ್, ತಾಲ್ಲೂಕು ಸಂಯೋಜಕಿ ಮಂಜುಳಾ ಭಜಂತ್ರಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕೆಎಚ್ಪಿಟಿ ಸಿಬ್ಬಂದಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಕಿಶೋರಿಯರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-32-1641744006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.