ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ‘ಆಶಾ’ ಆಗ್ರಹ

Last Updated 25 ಜುಲೈ 2020, 7:33 IST
ಅಕ್ಷರ ಗಾತ್ರ

ಶಕ್ತಿನಗರ: ವಿವಿಧ ಬೇಡಿಕೆ ಈಡೇರಿಕೆ ಈಡೇರಿಕೆಗೆ ಆಗ್ರಹಿಸಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ ಸಂಯೋಜಿತ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸಹಯೋಗದಲ್ಲಿ ಶುಕ್ರವಾರ ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ 15 ದಿನಕ್ಕೆ ಕಾಲಿಟ್ಟಿದೆ.

ಕಾರ್ಯಕರ್ತೆಯರಿಗೆ ಅಗತ್ಯ ಸುರಕ್ಷಾ ಸಾಧನಗಳನ್ನು ನೀಡಬೇಕು. 12 ಸಾವಿರ ಗೌರವ ಧನ ನೀಡಬೇಕು. ವಿವಿಧ ಬೇಡಿಕೆ ಈಡೇರಿಸುವಂತೆ ಇದುವರೆಗೆ ಸರ್ಕಾರಕ್ಕೆ ಹತ್ತಾರು ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಸ್ಪಂದಿಸಿಲ್ಲ ಎಂದು ಕಾರ್ಯಕರ್ತೆಯರು ಹೇಳಿದರು.

ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾದಲ್ಲಿ ಜುಲೈ 29 ರಂದು ರಾಜ್ಯ ವ್ಯಾಪ್ತಿಯಾಗಿ ಜಿಲ್ಲಾ ಮಟ್ಟದ ಬೃಹತ್ ಮಟ್ಟದ ಹೋರಾಟ ನಡೆಸುವುದಾಗಿ ಎಂದು ಆಶಾ ಕಾರ್ಯಕರ್ತೆಯರು ಹೇಳದರು.

ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆರಾದ ವೀಣಾಮ್ಮ, ಶಶಿಕಲಾ, ರಶ್ಮೀ , ಅಂಜಲಮ್ಮ, ಅಂಬಮ್ಮ, ರಾಣೇಮ್ಮ , ಕೊಂಡಮ್ಮ, ಮಾಣಿಕ್ಯಮ್ಮ , ಭೂದೇವಿ, ಶ್ರೀದೇವಿ, ಕೃಷ್ಣಾವೇಣಿ, ಸುರೇಶ, ವಿಜಯಲಕ್ಷ್ಮಿ , ಸುರೇಖಾ , ಗೌರಿದೇವಿ, ಶಾಕೀಲಾ, ಮಂಜುಳಾ, ಇಂದ್ರಮ್ಮ , ಈರಮ್ಮ , ಶೋಭಾ, ಸರಸ್ವತಿ , ಸುಜಾತ, ಸಾವಿತ್ರಿಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT