ಆಷಾಢೋತ್ಸವ: ಅದ್ಧೂರಿ ಮೆರವಣಿಗೆ

7

ಆಷಾಢೋತ್ಸವ: ಅದ್ಧೂರಿ ಮೆರವಣಿಗೆ

Published:
Updated:
Deccan Herald

ರಾಯಚೂರು: ಆಷಾಢೋತ್ಸವ ನಿಮಿತ್ತ ವಿಠ್ಠಲ ರುಕ್ಮಿಣಿ ದೇವರ ಮೆರವಣಿಗೆಯನ್ನು ಭಾವಸಾರ ಕ್ಷತ್ರೀಯ ಸಮಾಜದಿಂದ ಅದ್ಧೂರಿಯಾಗಿ ಬುಧವಾರ ನೆರವೇರಿಸಲಾಯಿತು.

ನಗರದ ಗಾಂಧಿಚೌಕ್‌ನಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಪಾಂಡುರಂಗ ವಿಠ್ಠಲ ರುಕ್ಮಿಣಿ ದೇವಸ್ಥಾನದವರೆಗೆ ನಡೆಯಿತು.

ಕಲಾ ತಂಡಗಳ ನೃತ್ಯ ಹಾಗೂ ಮಹಿಳೆಯರು ಕುಂಭ ಕಳಸದೊಂದಿಗೆ ಮೆರವಣಿಗೆಗೆ ಮೆರಗು ನೀಡಿದರು.

ಶಾಸಕರಾದ ಡಾ.ಶಿವರಾಜ ಪಾಟೀಲ, ಎನ್.ಎಸ್.ಬೋಸರಾಜು, ಮುಖಂಡ ಎ.ಪಾಪಾರೆಡ್ಡಿ, ನಗರಸಭೆ ಉಪಾಧ್ಯಕ್ಷ ಜಯಣ್ಣ, ಸಮಾಜದ ಗೌರವ ಅಧ್ಯಕ್ಷ ಜಯವಂತರಾವ ಪತಂಗೆ, ಅಧ್ಯಕ್ಷ ಶ್ರೀನಿವಾಸ ಪತಂಗೆ, ಮೀನಪ್ಪರಾವ್ ಹಂಚಾಟೆ, ಶ್ರೀಪಾದರಾವ್, ಸುಬ್ಬರಾವ್, ರಾಮಣ್ಣ ಹವಳೆ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !