ಶನಿವಾರ, ಸೆಪ್ಟೆಂಬರ್ 25, 2021
25 °C
ಬಾಲ್ಯ ವಿವಾಹ ತಡೆಯೋಣ ಅಭಿಯಾನದ ಜಾಗೃತಿ ರಥಕ್ಕೆ ಸ್ವಾಗತ

‘ಮಕ್ಕಳ ಹಕ್ಕುಗಳ ರಕ್ಷಣೆ ಎಲ್ಲರ ಹೊಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ‘ಬಾಲ್ಯ ವಿವಾಹ ತಡೆಯೋಣ’ ಜಾಗೃತಿ ಅಭಿಯಾನದ ರಥವನ್ನು ಶನಿವಾರ ಹೊನ್ನಹಳ್ಳಿ ಗ್ರಾಮದಲ್ಲಿ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಸ್ವಾಗತಿಸಿದರು.

ಮೇಲ್ವಿಚಾರಕಿ ಶ್ರೀದೇವಿ ಹಿರೇಮಠ ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಅಪೌಷ್ಟಿಕತೆ ನಿವಾರಣೆ, ಮಕ್ಕಳ ಪಾಲನೆ–ಪೋಷಣೆ, ಕಾನೂನಾತ್ಮಕ ರಕ್ಷಣೆ ಜತೆಗೆ ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು’ ಎಂದು ಅವರು ಹೇಳಿದರು.

ಇಲ್ಲದೆ ಹೋದಲ್ಲಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಾಗೃತಿ ಅಭಿಯಾನ: ಬಾಲ್ಯ ವಿವಾಹ ತಡೆಯೋಣ ರಥವನ್ನು ಸ್ವಾಗತಿಸಿಕೊಂಡು ಅಂಗನವಾಡಿ ನೌಕರರು ಹೊನ್ನಹಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು.

ಮನೆ ಮನೆಗೆ ತೆರಳಿ ಕರಪತ್ರ ವಿತರಿಸುವುದರ ಜತೆಗೆ ಮಕ್ಕಳ ಕಾನೂನು, ತಪ್ಪು ಕಂಡು ಬಂದಲ್ಲಿ ಎದುರಾಗುವ ಕಾನೂನು ಕ್ರಮಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ಈಚನಾಳ ವಲಯ (ಬಿ) ಅಂಗನವಾಡಿ ಕಾರ್ಯಕರ್ತೆಯರಾದ ಸರಸ್ವತಿ ರಾಠೋಡ, ರೆಹನಾಸುಲ್ತಾನ, ಶರಣಮ್ಮ, ಅಮರಮ್ಮ, ಅನ್ನಪೂರ್ಣ, ಮಡಿವಾಳಮ್ಮ, ಮಹಾಂತಮ್ಮ, ಹುಲಗಮ್ಮ, ಗುರುಸಿದ್ದಮ್ಮ, ಮಾನಮ್ಮ, ಕವಿತಾ, ಹಂಪಮ್ಮ, ಆದಮ್ಮ, ಬಸಲಿಂಗಮ್ಮ, ಮೀನಾಕ್ಷಿ, ಹುಸೇನಮ್ಮ, ಅಂಬಮ್ಮ ಸೇರಿದಂತೆ ಸಹಾಯಕಿಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು