ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಿ’

ಅರಕೇರಾದಲ್ಲಿ ಮಳೆ ನೀರು ಸಂರಕ್ಷಣೆ ಘಟಕ ಉದ್ಘಾಟನೆ
Last Updated 6 ಜುಲೈ 2022, 3:59 IST
ಅಕ್ಷರ ಗಾತ್ರ

ಅರಕೇರಾ (ದೇವದುರ್ಗ): ‘ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದರು.

ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಐಸಿಐಸಿಐ ಫೌಂಡೇಶನ್ ವತಿಯಿಂದ ನಿರ್ಮಿಸಲಾದ ಮಳೆ ನೀರು ಸಂರಕ್ಷಣೆ ಘಟಕವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು,‘ಮನುಷ್ಯ ಪ್ರಕೃತಿ ಜತೆ ಬದುಕುವುದನ್ನು ಕಲಿಯಬೇಕು. ಅವಶ್ಯಕತೆಗೆ ತಕ್ಕಷ್ಟೇ ಪಂಚಭೂತಗಳನ್ನು ಬಳಸಬೇಕು. ಪಕೃತಿ ವಿಕೋಪಗಳಿಗೆ ಕಾರಣವಾಗುವಂಥ ಚಟುವಟಿಕೆಗಳನ್ನು ಮಾಡಬಾರದು’ ಎಂದರು.

ಅರಣ್ಯಗಳಲ್ಲಿ ನೀರಿನ ಅಭಾವದ ಕಾರಣಕ್ಕೆ ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಹೇಳಿದರು. ಐಸಿಐಸಿಐ ಫೌಂಡೇಶನ್‌ನ ದಕ್ಷಿಣ ಭಾರತದ ಮುಖ್ಯಸ್ಥ ವೆಂಕಟೇಶ ಮಾತನಾಡಿ,‘ನೀರಿನ ಲಭ್ಯತೆ ಕಡಿಮೆ ಇರುವ ಪ್ರಾಂತ್ಯಗಳನ್ನು ಆಯ್ಕೆ ಮಾಡಿ ಅಲ್ಲಿನ ರೈತರಿಗೆ ನೀರಿನ ಮಹತ್ವ ಮತ್ತು ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದರು.

ಜಿಲ್ಲೆಯಲ್ಲಿ 58ಕ್ಕೂ ಹೆಚ್ಚು ಮಳೆನೀರು ಸಂರಕ್ಷಣೆ ಘಟಕಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ 250ಕ್ಕೂ ಹೆಚ್ಚು ಶಾಲೆಗಳಲ್ಲಿ ಘಟಕ ನಿರ್ಮಾಣ ಗುರಿ ಹಾಕಿಕೊಳ್ಳಲಾ ಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಗಮ್ಮ ಮುದುಕಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತೆ ಗರಿಮಾ ಪನ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್. ದುರುಗೇಶ್, ತಹಶೀಲ್ದಾರ್ ಶ್ರೀನಿವಾಸ ಚಾಪೇಲ್, ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ, ತಾ.ಪಂ. ಇಒ ಪಂಪಾಪತಿ ಹಿರೇಮಠ, ಬಿಇಒ ಆರ್.ಇಂದಿರಾ, ಬಿಜೆಪಿ ಮುಖಂಡರಾದ ಕೆ.ಅನಂತರಾಜ ನಾಯಕ, ಮಾಜಿ ಜಿ.ಪಂ. ಸದಸ್ಯ ಸತ್ಯನಾರಾಯಣ ನಾಯಕ ಪೊಲೀಸ್ ಪಾಟೀಲ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ ಜೇರಬಂಡಿ, ಎಪಿಎಂಸಿ ಉಪಾಧ್ಯಕ್ಷ ಕೆಂಚಣ್ಣ ಪೂಜಾರಿ ಕೊತ್ತದೊಡ್ಡಿ, ರಿಮ್ಸ್ ಆಡಳಿತ ಮಂಡಳಿ ನಾಮನಿರ್ದೇಶಿತ ಸದಸ್ಯ ಡಾ.ಎಚ್.ಎ.ನಾಡಗೌಡ, ಎಸ್‌ಡಿಎಂಸಿ ಅಧ್ಯಕ್ಷ ಸೂಗುರೇಶ್ವರ ಎಸ್‌.ಗುಡಿ ಹಾಗೂ ಮುಖ್ಯೋಪಾಧ್ಯಾಯ ಕುಮಾರ ಸ್ವಾಮಿ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT