ಗುರುವಾರ , ನವೆಂಬರ್ 14, 2019
19 °C

ರಾಯಚೂರು: ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿಹೋದ ಬಾಲಕ, ತೀವ್ರ ಶೋಧ

Published:
Updated:

ರಾಯಚೂರು: ಕೃಷ್ಣಾ ನದಿತೀರದಲ್ಲಿ ದನ ಮೇಯಿಸುವಾಗ ದಿಢೀರ್ ಬಂದ ಪ್ರವಾಹದಲ್ಲಿ ಸೋಮವಾರ ಕೊಚ್ಚಿಹೋಗಿರುವ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಚಿಂಚೋಡಿ ಗ್ರಾಮದ ಸಂತೋಷ ದೇವೇಗೌಡ (16) ಎಂಬ ಬಾಲಕನ ಶೋಧ ಮುಂದುವರಿದಿದೆ.

ತಿಂಥಣಿ ಸೇತುವೆಯಿಂದ ಅರ್ಧ ಕಿಲೋ ಮೀಟರ್ ಮುಂದೆ ಚಿಂಚೋಡಿ ಗ್ರಾಮವಿದೆ. ಅಗ್ನಿಶಾಮಕ ದಳದವರು ಮತ್ತು ಪೊಲೀಸರು ನದಿತೀರಗಳಲ್ಲಿ ಹುಡುಕಾಟ ಮಾಡುತ್ತಿದ್ದಾರೆ. ನದಿ ಪ್ರವಾಹ ಏರುಗತಿಯಲ್ಲಿದ್ದು ಬಾಲಕನ ಮೃತದೇಹ ಪತ್ತೆ ಸವಾಲಾಗಿದೆ.

ಪ್ರತಿಕ್ರಿಯಿಸಿ (+)