ಸೋಮವಾರ, ಮೇ 10, 2021
25 °C

ಬಹುತೇಕ ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ರಾಯಚೂರು: ಇಲ್ಲಿನ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಬಹುತೇಕ ಬಸ್ ಸಂಚಾರ ಆರಂಭವಾಯಿತು.

ಭಾನುವಾರ ರಾಯಚೂರು ಮೂರನೇ ಡಿಪೋದಿಂದ 19 ಹಾಗೂ ಸೆಕೆಂಡ್ ಡಿಪೋದಿಂದ 8 ಬಸ್‌ಗಳು ಸೇರಿ ಶೇ 40 ರಷ್ಟು ಬಸ್‌ಗಳು ಸಂಚರಿಸಿದವು. ಹೈದರಾಬಾದ್, ಆದೋನಿ, ಮಂತ್ರಾಲಯ, ಜಿಲ್ಲೆಯ ಲಿಂಗಸುಗೂರು, ಸಿಂಧನೂರು ಮಾರ್ಗದ ಬಸ್‌ಗಳು ಸಂಚರಿಸಿದವು.

ಮಾರ್ಚ್ 7 ರಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರ ಸಮಸ್ಯೆಗೆ ಸಿಲುಕಿದ್ದರು. ದುಪ್ಪಟ್ಟು ದರದಲ್ಲಿ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೂಲಕ ವಿವಿಧ ಊರುಗಳಿಗೆ ತೆರಳಬೇಕಾಗಿತ್ತು. ಬಸ್‌ಗಳ ಆರಂಭದ ಬಗ್ಗೆ ಕೆಲವರಿಗೆ ಮಾಹಿತಿ ಇದ್ದ ಕಾರಣ ನಿಲ್ದಾಣಕ್ಕೆ ಬಂದರೆ ಹಲವರಿಗೆ ಸಮರ್ಪಕ ಮಾಹಿತಿ ಇರದ ಕಾರಣ ಪ್ರಯಾಣಿಕರ ಸಂಖ್ಯೆ ಎಂದಿನಂತೆ ಇರಲಿಲ್ಲ.

ಸಾರಿಗೆ ನೌಕರರ ಮುಷ್ಕರದಿಂದ ಬಸ್ ನಿಲ್ದಾಣದ ಸುತ್ತಮುತ್ತಲಿನ ವ್ಯಾಪಾರ ಮಳಿಗೆಗಳು ಹಾಗೂ ಹೋಟೆಲ್ ವ್ಯಾಪಾರದ ಮೇಲೆ
ತೀವ್ರ ಪರಿಣಾಮ ಬೀರಿತ್ತು. ಜನಸಾಮಾನ್ಯರು ಕೂಡ ನಿತ್ಯ ತೊಂದರೆ ಅನುಭವಿಸಿದರು.

ಅಲ್ಲದೇ ವಿವಿಧ ತಾಲ್ಲೂಕುಗಳಿಂದ ಬರುವ ಸ್ನಾತಕೊತ್ತರ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ, ಗ್ರಾಮಗಳಿಂದ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಬರಲು ಬಸ್ ಸಂಚಾರ ಇರದ ಕಾರಣ ಬಹಳ ತೊಂದರೆಯಾಗಿತ್ತು. ಈಗ ಬಸ್ ಸಂಚಾರ ಆರಂಭದಿಂದ ನಿಟ್ಟುಸಿರು ಬಿಡುವಂತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು