ಶುಕ್ರವಾರ, ಮೇ 14, 2021
29 °C

ಲಿಂಗಸುಗೂರು: ಬಸ್ ಸಂಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘಟನೆ ಕರೆ ಮೇರೆಗೆ ಐದು ದಿನಗಳಿಂದ ಸ್ಥಗಿತಗೊಂಡಿದ್ದ ಬಸ್‍ ಸಂಚಾರ ಭಾನುವಾರ ಕೆಲ ನೌಕರರ ಹಾಜರಾತಿಯಿಂದ ಮತ್ತೆ ಆರಂಭಗೊಂಡಿತು.

ಭಾನುವಾರ ಸ್ಥಳೀಯ ವಿವಿಧ ಮಾರ್ಗಗಳು ಸೇರಿದಂತೆ ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದತ್ತ ಬಸ್‍ ಬಿಡಲಾಗಿದ್ದು, ನಿರೀಕ್ಷಿತ ಪ್ರಮಾಣದ ಪ್ರಯಾಣಿಕರ ಕೊರತೆ ಕಂಡು ಬಂತು.

ಕೆಲ ದಿನಗಳಿಂದ ಬಸ್‍ ಸಂಚಾರ ಸ್ಥಗಿತಗೊಂಡು ಬಿಕೋ ಎನ್ನುತ್ತಿದ್ದ ಬಸ್‍ ನಿಲ್ದಾಣದಲ್ಲಿ ಸಾರಿಗೆ ನೌಕರರ ಚಲನವಲನ ಕಂಡು ಬಂತು. ನಾಳೆಯಿಂದ ಹೆಚ್ಚಿನ ಬಸ್‍ ಸೇವೆ ಆರಂಭಗೊಳ್ಳಲಿದೆ ಎಂದು ನೌಕರರು ಹೇಳಿಕೊಂಡಿದ್ದಾರೆ.

ಸಾರಿಗೆ ಘಟಕ ವ್ಯವಸ್ಥಾಪಕ ಆದಪ್ಪ ಕುಂಬಾರ ಮಾತನಾಡಿ, ‘ಐದು ಬಸ್‍ ಶ್ರೀಶೈಲಕ್ಕೆ, ನಾಲ್ಕು ಬಸ್‍ ಗ್ರಾಮೀಣ ಪ್ರದೇಶಕ್ಕೆ ಓಡಿಸಲಾಗಿದೆ. ಎರಡು ದಿನಗಳಲ್ಲಿ ಬಸ್‍ ಸಾರಿಗೆ ಸಂಚಾರ ಸಾಮಾನ್ಯ ಸ್ಥಿತಿಗೆ ಬರಲಿದೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.