ಮಂಗಳವಾರ, ಅಕ್ಟೋಬರ್ 15, 2019
29 °C

ಬಿಡಾಡಿ ದನಗಳೆಲ್ಲ ಗೋಶಾಲೆಗೆ

Published:
Updated:

ರಾಯಚೂರು: ನಗರದ ರಸ್ತೆಗಳಲ್ಲಿ ವಾಹನಗಳು ಮತ್ತು ಜನ ಸಂಚಾರಕ್ಕೆ ತೊಂದರೆ ಕೊಡುವ ಬಿಡಾಡಿ ದನಗಳನ್ನೆಲ್ಲ ಆಲಿಕೂರು ಗ್ರಾಮದ ಗೋಶಾಲೆಗೆ ಸಾಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.

ನಗರಸಭೆ ಹಾಗೂ ಜಿಲ್ಲಾ ಪೊಲೀಸರು ಈ ಕಾರ್ಯಾಚರಣೆ ಆರಂಭಿಸಿ ಮೂರು ತಿಂಗಳುಗಳಾಗಿದೆ. ಈ ಬಗ್ಗೆ ಪದೆಪದೆ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಬಿಡಾಡಿ ದನಗಳನ್ನು ಮರಳಿ ತೆಗೆದುಕೊಂಡು ಹೋದವರು ನಿಯಮ ಪಾಲನೆ ಮಾಡುತ್ತಿಲ್ಲ. ರಸ್ತೆಗೆ ದನಗಳನ್ನು ಬಿಡುವುದು ಮರುಕಳಿಸುತ್ತಿದೆ.

ಅಕ್ಟೋಬರ್‌ 1 ರ ರಾತ್ರಿಯಿಂದಲೇ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿ, ಬಿಡಾಡಿ ದನಗಳನ್ನು ಮಹಿಳಾ ಸಮಾಜ ಆವರಣದಲ್ಲಿ ಇರಿಸಲಾಗಿದೆ. ಇನ್ನು ಮುಂದೆ ಬಿಡಾಡಿ ದನಗಳು ಕಂಡುಬಂದಲ್ಲಿ ಗೋಶಾಲೆಗೆ ರವಾನಿಸುವ ಕಾರ್ಯ ನಡೆಯಲಿದೆ. ಜನರು ಇದಕ್ಕೆಲ್ಲ ಸಹಕರಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.

Post Comments (+)