ಮುದಗಲ್: ಸಮೀಪದ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾನುವಾರು ಶಡ್ ನಿರ್ಮಿಸಿಕೊಂಡ ಫಲಾನುಭವಿಗಳು ಅನುದಾನಕ್ಕಾಗಿ ಪರದಾಡುತ್ತಿದ್ದಾರೆ.

ನರೇಗಾದಡಿ ಜಾನುವಾರು ಶಡ್ ನಿರ್ಮಿಸಿಕೊಂಡು ಆರು ತಿಂಗಳು ಗತಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನಕ್ಕಾಗಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ.

2024-25ನೇ ಸಾಲಿಗೆ ನರೇಗಾ ಯೋಜನೆಯಡಿ ತಲೇಖಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ಸಭೆ ಮಾಡಿದರು. ಜನರ ಬೇಡಿಕೆ ಅನುಸಾರ ಕಾಮಗಾರಿ ಆರಂಭಿಸಲು ಸಭೆಯ ನಡುವಳಿ ಪುಸ್ತಕದಲ್ಲಿ ನಮೋದಿಸಿದರು. ಅದರಂತೆ ಕ್ರಿಯಾಯೋಜನೆ ರೂಪಗೊಂಡಿತು. ಪಂಚಾಯಿತಿಯಲ್ಲಿ ಅನುಮೊದನೆ ಪಡೆಯಿತು. ನಿಯಮಾನುಸಾರ 2023-24 ರಲ್ಲಿ 107 ಹಾಗೂ 2024-25ರಲ್ಲಿ 30 ಶೆಡ್ಗಳಿಗೆ ಮಂಜೂರಾತಿ ಪಡೆದರು. ಅಂದಾಜು ಪತ್ರಿಕೆಯಂತೆ ಶಡ್ ನಿರ್ಮಿಸಿಕೊಂಡರು.

ಫಲಾನುಭವಿಗಳಿಗೆ ಜನವರಿ ತಿಂಗಳಲ್ಲಿ ನರೇಗಾ ಕೂಲಿ ಹಣ ಪಾವತಿಯಾಗಿದೆ. ಸಾಮಾಗ್ರಿ ಮೊತ್ತ ಪಾವತಿಯಾಗಿಲ್ಲ. 100ಕ್ಕೂ ಹೆಚ್ಚು ಜಾನುವಾರು ಮಾಲೀಕರು ಸಾವಿರಾರು ರೂಪಾಯಿ ಖರ್ಚು ಮಾಡಿ ಶೆಡ್ ನಿರ್ಮಿಸಿ ಆರು ತಿಂಗಳು ಗತಿಸಿವೆ. ಹಣ ಸಿಕ್ಕಿಲ್ಲ ಎಂದು ಫಲಾನುಭವಿಗಳಾದ ಸಂತೋಷ, ಮೇಗಪ್ಪ, ಶಂಕ್ರಪ್ಪ ತಮ್ಮ ನೋವು ತೋಡಿಕೊಂಡರು.

‘ಗ್ರಾಮ ಪಂಚಾಯಿತಿದಿಂದ ಜಾನುವಾರು ಶೆಡ್ ಮಂಜೂರಾಗಿದ್ದ ಕಾರಣ ರಾಸುಗಳ ರಕ್ಷಣೆಗೆ ₹50 ಸಾವಿರ ಸಾಲ ಪಡೆದು ಶೆಡ್ ನಿರ್ಮಿಸಿಕೊಂಡು 6 ತಿಂಗಳ ಗತಿಸಿದೆ. ಬಿಲ್ಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ’ ತಿಪ್ಪಣ್ಣ ಹಡಗಲಿ ಹೇಳಿದರು.

ಶಡ್ ನಿರ್ಮಾಣವಾದರೂ ಬಾರದ ಅನುದಾನ ಕಚೇರಿಗಳಿಗೆ ಅಲೆದು ಸುಸ್ತಾದ ಫಲಾನುಭವಿಗಳು

ತಲೇಖಾನ ಗ್ರಾಮ ಪಂಚಾಯಿತಿಯಲ್ಲಿ ಪದೇಪದೆ ಕಿರಿಕಿರಿ ಉಂಟಾಗುವುದರಿಂದ ಪಿಡಿಒ ಮತ್ತು ಎಂಜಿಯರ್ಗಳು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ತೊಂದರೆಯಾಗಿದೆ ಶಿವಾನಂದ ರಡ್ಡಿ ಸಹಾಯಕ ನಿರ್ದೇಶಕ(ನರೇಗಾ) ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಕೆಲವರು ಸ್ವಾರ್ಥಕ್ಕಾಗಿ ದೂರು ನೀಡಿ ಪಂಚಾಯಿತಿ ಹೆಸರು ಹಾಳು ಮಾಡಿದಲ್ಲದೇ ಅಧಿಕಾರಿಗಳಿಗೂ ತೊಂದರೆ ನೀಡುತ್ತಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕುಂಠಿತವಾಗಿದೆ ಹನುಮಂತ ಗಂಟಿ ದುರುಗಪ್ಪ ಕಟ್ಟಿಮನಿ ಗ್ರಾಮ ಪಂಚಾಯಿತಿ ಸದಸ್ಯರು ಬೆಂಗಳೂರಿನ ಕಚೇರಿಗೆ ಅಲೆದು ಜಾನುವಾರು ಶೆಡ್ ಮಂಜೂರು ಮಾಡಿಸಿಕೊಂಡು ಬಂದು ಫಲಾನುಭವಿಗಳಿಗೆ ನೀಡಿದ್ದೇವೆ. ಶೆಡ್ ನಿರ್ಮಿಸಿದ ಫಲಾನುಭವಿಗಳಿಗೆ ಬಿಲ್ ನೀಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಪಾಂಡುರಂಗ ನಾಯ್ಕ ಮಾನಸಿಂಗ್ ರಾಠೋಡ ಗ್ರಾಮ ಪಂಚಾಯಿತಿ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.