ಮಂಗಳವಾರ, ಅಕ್ಟೋಬರ್ 27, 2020
25 °C
ಮೂರು ದಿನವಾದರೂ ಪತ್ತೆಯಾಗದ ಚನ್ನಬಸವ

ಮಸ್ಕಿ: ಮುಂದುವರೆದ ಶೋಧ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸ್ಕಿ: ಮಸ್ಕಿ ಜಾಲಾಶಯದಿಂದ ಭಾನುವಾರ ನೀರು ಬಿಟ್ಟ ಹಿನ್ನೆಲೆಯಲ್ಲಿ ಮಸ್ಕಿ ಹಳ್ಳದ ಪ್ರವಾಹಕ್ಕೆ ಕೊಚ್ಚಿಹೋದ ಚನ್ನಬಸವ ಮೂರು ದಿನವಾದರೂ ಪತ್ತೆಯಾಗದ ಕಾರಣ ಕುಟುಂಬದ ಸದಸ್ಯರಲ್ಲಿ ಆಕ್ರಂದನ ಮಡುಗಟ್ಟಿದೆ.

ಸತತ ಮೂರು ದಿನಗಳಿಂದ ತಾಲ್ಲೂಕು ಆಡಳಿತ ಶೋಧ ಕಾರ್ಯ ನಡೆಸಿದೆ. ಮಂಗಳವಾರ ಹಳ್ಳದಲ್ಲಿ ಮತ್ತೆ ಪ್ರವಾಹ ಬಂದ ಕಾರಣ ಶೋಧ ಕಾರ್ಯಕ್ಕೆ ಸ್ವಲ್ಪ ಅಡ್ಡಿಯಾಗಿತ್ತು. ನಂತರ ಪುನಃ ಶೋಧ ಕಾರ್ಯ ಆರಂಭಿಸಲಾಯಿತು. ಅಗ್ನಿ ಶಾಮಕ ಸಿಬ್ಬಂದಿ, ಸ್ಥಳೀಯ ಪೊಲೀಸರ ಜೊತೆಗೆ ಮೂರು ತೆಪ್ಪಗಳು, ನುರಿತ ಮೀನುಗಾರರ ಜೊತೆಗೆ ಸ್ಥಳೀಯ ಯುವಕರು ಶೋಧ ಕಾರ್ಯ ನಡೆಸಿದ್ದಾರೆ.

ಹಳ್ಳದಲ್ಲಿ ಕಸದ ರಾಶಿ, ಗಿಡಗಳು ತುಂಬಿದ್ದರಿಂದ ಹುಡುಕುವುದು ಕಷ್ಟದ ಕೆಲಸವಾಗಿದೆ. ನೀರಿನಲ್ಲಿ ಕೊಚ್ಚಿಹೋದ ಚನ್ನಬಸವ 24 ಗಂಟೆಯಲ್ಲಿ ಪತ್ತೆಯಾಗಬೇಕು. ಮೂರು ದಿನವಾದರೂ ಪತ್ತೆಯಾಗದೆ ಇರುವುದು ಕುಟುಂಬಸ್ಥರಲ್ಲಿ ಆತಂಕ ಹೆಚ್ಚಿಸಿದೆ.

ತಹಶೀಲ್ದಾರ್ ಬಲರಾಮ ಕಟ್ಟಿಮನಿ, ಸರ್ಕಲ್ ಇನ್‌ಸ್ಪೆಕ್ಟರ್ ದೀಪಕ್ ಬಿ. ಬೂಸರೆಡ್ಡಿ, ಸಬ್ ಇನ್‌ಸ್ಪೆಕ್ಟರ್ ಸಣ್ಣ ವೀರೇಶ ನೇತೃತ್ವದಲ್ಲಿ ಪ್ರವಾಹದಲ್ಲಿ ಕಣ್ಮರೆಯಾದ ಚನ್ನಬಸವನ ಶೋಧ ಕಾರ್ಯ ಮುಂದುವರೆದಿದೆ.

ಭಾನುವಾರ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ಚನ್ನಬಸವನನ್ನು ಹಗ್ಗದ ಸಹಾಯದಿಂದ ಕರೆದುಕೊಂಡು ವಾಪಾಸು ಬರುತ್ತಿದ್ದ ವೇಳೆ ಮೂವರು ಹಗ್ಗ ತುಂಡಾಗಿ ಚನ್ನಬಸವ ಸೇರಿ ಮೂವರು ರಕ್ಷಣಾ ಸಿಬ್ಬಂದಿ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು. ಮೂವರು ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿತ್ತು. ಚನ್ನಬಸವ ಮಾತ್ರ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರು.

ಪ್ರವಾಹದಲ್ಲಿ ಕೊಚ್ಚಿಹೋದ ನನ್ನ ಸಹೋದರ ಚನ್ನಬಸವನನ್ನು ಬೇಗ ಹುಡುಕಿಕೋಡಿ ಎಂದು ಆತನ ಸಹೋದರ ನಾಗರಾಜ ತಾಲ್ಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು