‘ಬಾಲ್ಯ ವಿವಾಹಕ್ಕೆ ಸಾಮಾಜಿಕ ದುಷ್ಪರಿಣಾಮಗಳೇ ಕಾರಣ’

ಭಾನುವಾರ, ಜೂಲೈ 21, 2019
22 °C

‘ಬಾಲ್ಯ ವಿವಾಹಕ್ಕೆ ಸಾಮಾಜಿಕ ದುಷ್ಪರಿಣಾಮಗಳೇ ಕಾರಣ’

Published:
Updated:
Prajavani

ರಾಯಚೂರು: ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ದುಷ್ಪಾರಿಣಾಮಗಳು ಬಾಲ್ಯವಿವಾಹಕಕ್ಕೆ ಮುಖ್ಯ ಕಾರಣ ಎಂದು ಸಮಾಜ ಕಾರ್ಯಕರ್ತ ತಿಕ್ಕಯ್ಯ ಹೇಳಿದರು.

ನಗರದ ಹಾಷ್ಮಿಮಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಚೇರಿ, ಮಕ್ಕಳ ರಕ್ಷಣಾ ಘಟಕದಿಂದ ಗುರುವಾರ ಆಯೋಜಿಸಿದ್ದ 18 ವರ್ಷದೊಳಗಿನ ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತು ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಬಾಲ ಕಾರ್ಮಿಕ, ಪೋಕ್ಸೊ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾನವ ಅಭಿವೃದ್ಧಿಯಾಗಬೇಕಾದರೆ ದೇಶದ ರಸ್ತೆಗಳು, ಕಾರ್ಖಾನೆಗಳು ಅಭಿವೃದ್ದಿ ಆಗುವುದರಿಂದ ಆಗಲ್ಲ. ಮಕ್ಕಳನ್ನು ಅಭಿವೃದ್ಧಿ ಮಾಡಿದರೆ ದೇಶದ ಅಭಿವೃದ್ಧಿ ಆಗಲಿದೆ. ಈಚೆಗೆ ಪೋಕ್ಸೊ ಕಾಯ್ದೆಯ ಪ್ರಕರಣಗಳು ಹೆಚ್ಚುತ್ತಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಪರಮೇಶ್ವರ ನಾಯಕ ಮಾತನಾಡಿ, ಸರ್ಕಾರದ ಯೋಜನೆ ಹಾಗೂ ಬಾಲಮಂದಿರಗಳ ಸದುಪಯೋಗ ಪಡಿಸಿಕೊಂಡು ದೌರ್ಜನ್ಯಗಳ ಬಗ್ಗೆ ಸಹಾಯವಾಣಿ ಮೂಲಕ ದೂರು ನೀಡಬೇಕು ಎಂದು ಹೇಳಿದರು.

ಸಾಂಸ್ಥಿಕ ರಕ್ಷಣಾಧಿಕಾರಿ ಹನುಮೇಶ್, ದಿನೇಶಕುಮಾರ, ಈರಮ್ಮ, ಸಹಶಿಕ್ಷರಾದ ಆಶಾ, ಉನಿಶ್, ಸುವರ್ಣ, ಶಂಕರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !