‘ಸ್ಪರ್ಧಾ ಮನೋಭಾವದಿಂದ ಬದಲಾವಣೆ’

7
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ತ ಜಿಲ್ಲಾಮಟ್ಟದ ಆಕಾಶವಾಣಿ ರಸಪ್ರಶ್ನೆ

‘ಸ್ಪರ್ಧಾ ಮನೋಭಾವದಿಂದ ಬದಲಾವಣೆ’

Published:
Updated:
Deccan Herald

ರಾಯಚೂರು: ಸ್ಪರ್ಧಾ ಮನೋಭಾವ ಪ್ರತಿ ಯುವಕನಲ್ಲಿರಬೇಕು. ಆಗ ಮಾತ್ರ ಏನಾದರೂ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಂ. ಎ ಸುದರ್ಶನ ಅವರು ಹೇಳಿದರು.

ನಗರದ ಆಕಾಶವಾಣಿ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಆಕಾಶವಾಣಿ ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸಪ್ರಶ್ನೆಯಂತಹ ಕಾರ್ಯಕ್ರಮಗಳು ಬೇರೆ ಬೇರೆ ಸಂಸ್ಥೆಗಳು ಮಾಡುತ್ತಿವೆ. ಅದರ ಮೂಲಕ ಯುವಕರಲ್ಲಿ ಹೆಚ್ಚಿನ ಜ್ಞಾನವನ್ನು ಬೆಳಸುವ ಕಾರ್ಯ ಆಗುತ್ತಿದೆ. ಈ ಹಿಂದೆ ಇಷ್ಟೊಂದು ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಆದರೂ ನಾವೆಲ್ಲ ಸ್ಪರ್ಧೆ ಮಾಡಿ ಇದ್ದ ಅವಕಾಶಗಳನ್ನು ಬಳಸಿಕೊಂಡು ಬೆಳೆದಿದ್ದೇವೆ ಎಂದು ಅನುಭವ ಹಂಚಿಕೊಂಡರು.

ಆಕಾಶವಾಣಿಯಂತಹ ಮಾಧ್ಯಮ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸುವುದರ ಮೂಲಕ ಯುವಕರಲ್ಲಿ ಸ್ಪರ್ಧಾ ಮನೋಭಾವನೆಯನ್ನು ಹೆಚ್ಚು ಮಾಡುವಲ್ಲಿ ಒಳ್ಳೆಯ ಕಾರ್ಯಮಾಡುತ್ತಿವೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕು ಎಂದು ಸ್ಪರ್ಧಿಗಳಿಗೆ ಕಿವಿಮಾತು ಹೇಳಿದರು.

ಸ್ಪರ್ಧೆಯನ್ನು ಶ್ರದ್ದೆಯಿಂದ ಮಾಡಿದರೆ ಅದಕ್ಕೆ ಬೆಲೆ. ಕೇವಲ ಸ್ಪರ್ಧೆಗಾಗಿ ಸ್ಪರ್ಧೆ ಮಾಡಿದರೆ ಅದರ ಮೌಲ್ಯ ಕ್ಷೀಣಿಸುತ್ತದೆ. ಪ್ರಾಮಾಣಿಕತೆ, ನಿರಂತರ ಪರಿಶ್ರಮವೇ ಯಶಸ್ಸಿನ ಮೂಲ. ಅಡ್ಡದಾರಿ ಮೂಲಕ ಗೆಲ್ಲುವ ಪ್ರವೃತ್ತಿ ಕಡಿಮೆಯಾಗಬೇಕು. ಅದು ಶಾಶ್ವತ ಅಲ್ಲ ಎಂದು ಹೇಳಿದರು.

ಎಲ್ಲಾ ಸಾಧಕರ ಹಿಂದಿನ ಜೀವನವು ಕತ್ತಲೆಯಿಂದಲೇ ಕೂಡಿರುತ್ತದೆ. ಆದರೆ ಅವರ ಪರಿಶ್ರಮವು ಅವರನ್ನು ಬಳಕಿಗೆ ತಂದಿದೆ. ಆ ನಿಟ್ಟಿನಲ್ಲಿ ಯಾವುದಕ್ಕ ಹೆದರದೆ ಮುನ್ನುಗ್ಗುವ ಪ್ರವೃತ್ತಿ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.

ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್ ಲೋಕೇಶ ಮಾತನಾಡಿ, ಸ್ಪರ್ಧೆ ಎಲ್ಲಾ ಕಡೆ ಇದೆ. ಸ್ಪರ್ಧೆ ಸ್ಪರ್ಧಿಸುವ ಮಾರ್ಗಗಳು ಸರಿಯಾಗಿರಬೇಕು. ಸರಿಯಾದ ಆಯ್ಕೆ ಸರಿಯಾದ ನಿರ್ಧಾರ ಮುಖ್ಯ. ಯಾರೇ ಅಗಲಿ ಖಚಿತತೆಯಿಂದ ನಿರಂತರ ಶ್ರಮಿದಿಂದ ಪ್ರಯತ್ನಶೀಲತೆಯಿಂದ ಸ್ಪರ್ಧೆಗಳನ್ನು ಯಾರು ಎದುರಿಸುತ್ತಾರೋ ಅವರು ಜಯಶಾಲಿಗಳಾಗುತ್ತಾರೆ ಎಂದು ಹೇಳಿದರು.

‘ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚಾರಣೆ ನೆನಪಿಗಾಗಿ ಅವರನ್ನು ಸ್ಮರಿಸುವ ನಿಟ್ಟಿನಲ್ಲಿ ಆಕಾಶವಾಣಿಯಿಂದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸೂಕ್ತವಾಗಿತ್ತು. ಅದೇ ರೀತಿ ಈಗ ಕಾರ್ಯಕ್ರಮ ಮಾಡಿರುವುದು ಸಮಂಜಸವಾಗಿದೆ. ನಾನು ಕ್ವಿಜ್ ಮಾಸ್ಟರ್ ಆಗಿ ಈ ವಿಷಯ ಬಗ್ಗೆ ತಯಾರುಮಾಡಿಕೊಳ್ಳುವಾಗ ಗಾಂಧಿಜೀಯವರ ಕುರಿತು ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದೇನೆ. ಹಾಗಾಗೀ ವಿದ್ಯಾರ್ಥಿಗಳು ಕೂಡ ಓದಿ ವಿಚಾರಗಳನ್ನು ತಿಳಿದುಕೊಂಡು ಸ್ಪರ್ಧೆ ಮಾಡಿದರೆ ಯಶಸ್ಸು ನಿಮ್ಮ ಹಿಂದೆಯೇ ಇರುತ್ತದೆ ಎಂದು ತಿಳಿಸಿದರು.

ಪ್ರೋ.ಜೆ ಅಶೋಕ ಮಾತನಾಡಿ, ಅಧ್ಯಯನ ಮಾಡದೆ ಯಶಸ್ಸು ಕಂಡ ಉದಾಹಣೆಗಳು ಜಗತ್ತಿನಲ್ಲಿ ಇಲ್ಲ. ಯಾರು ಅಧ್ಯಯನದಲ್ಲಿ ನಿರತರಾಗಿರುತ್ತಾರೋ ಅವರು ಸಾಧಿಸುತ್ತಾರೆ. ಯಾರು ಸ್ಪರ್ಧೆಗೆ ತಯಾರು ಮಾಡುಕೊಳ್ಳುತ್ತಾರೋ ಅವರು ಯಶಸ್ಸು ಕಾಣುತ್ತಾರೆ. ಆ ನಿಟ್ಟಿನಲ್ಲಿ ಯುವರು ಸ್ಪರ್ಧಾತ್ಮಕ ಯುಗಕ್ಕೆ ತಯಾರಾಗಬೇಕು ಎಂದು ಹೇಳಿದರು.

ಆಕಾಶವಾಣಿಯ ಪ್ರಸಾರ ನಿರ್ವಾಹಕರು ಮತ್ತು ಜಿಲ್ಲಾ ರಸಪ್ರಶ್ನೆ ಕಾರ್ಯಕ್ರಮದ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾಮಟ್ಟದ ರಸಪ್ರಶ್ನೆ ಕಾರ್ಯಕ್ರದಲ್ಲಿ ಒಟ್ಟು 12 ಕಾಲೇಜುಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಯಚೂರು ಕೃಷಿಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಮಲ್ಲಿಕೇಶ ಮತ್ತು ಅಕ್ಷಯ್ ಕುಮಾರ್ ಮೊದಲ ಬಹುಮಾನ ಪಡೆದವರು ಪಡೆದರು. ಧ್ವಿತಿಯಾ ಬಹುಮಾನ ಸಿರವಾರದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಮರೇಶ ಎನ್, ಮತ್ತು ಶಿವಕುಮಾರ್ ಅವರು ಪಡೆದುಕೊಂಡರು. ತೃತಿಯ ಬಹುಮಾನ ದೇವದುರ್ಗದ ಪ್ರಥಮ ಧರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ವಿಜಯ್ ಕುಮಾರ್ ಮತ್ತು ಸ್ವತಂತ್ರಕುಮಾರ್ ಅವರು ಪಡೆದರು.

ಆಕಾಶವಾಣಿ ತಾಂತ್ರಿಕ ವಿಭಾಗದ ಮುಖ್ಯಸ್ಥ ವೆಂಕಟಸುಬ್ಬಯ್ಯ, ಆಡಳಿತ ವಿಭಾಗದ ನಾಗಮಣಿ ಜಂಪರೆಡ್ಡಿ ಜಾಫರ್, ನರಸಿಂಹ, ಲಾವಣ್ಯ, ಗುರು, ನರೆಂದ್ರ ಇದ್ದರು.

ಶಿಲ್ಪಾರೆಡ್ಡಿ ನಿರೂಪಿಸಿದರು. ಕೃಷ್ಣಮೂರ್ತಿ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !