ಹಟ್ಟಿ ಚಿನ್ನದಗಣಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರಲು ಹೊರಟಿದ್ದು ಇದನ್ನು ತಡೆ ಹಿಡಿಯದಿದ್ದರೆ ಜನ ಸಾಮಾನ್ಯರಿಗೆ ಅಪಾಯ ಕಾದಿದೆ’ ಎಂದು ಎಐಟಿಯುಸಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್ ಹೇಳಿದರು.

ಹಟ್ಟಿ ಪಟ್ಟಣದ ಕ್ರೀಡಾ ಸಂಸ್ಧೆಯ ಆವರಣದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಸಂಘಟನೆ ಹಮ್ಮಿಕೊಂಡಿದ್ದ ಸಿಪಿಐ ಸಂಸ್ಧಾಪನ ದಿನ ಹಾಗೂ ನಿಧಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಆರ್ಎಸ್ಎಸ್ ಹಾಗೂ ಬಿಜೆಪಿ ಸರ್ಕಾರದಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಸಂಘಟನೆಗಳ ಒಗ್ಗಟ್ಟನ್ನು ನಾಶಮಾಡುವ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಎಲ್ಲಾ ಕಾರ್ಮಿಕ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಹೇಳಿದರು.

ಉದ್ಯೋಗ ಇಲ್ಲದೆ ಯುವಕರು ಪರದಾಡುತ್ತಿದ್ದಾರೆ. ಎಲ್ಐಸಿ ಬ್ಯಾಂಕ್, ಸೇರಿದಂತೆ ವಿದ್ಯುತ್ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವುದು ಖಂಡನೀಯ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಖಾಸಗೀಕರಣ ಮಾಡುವುದನ್ನು ಬಿಡಬೇಕು. ಇಲ್ಲವಾದರೆ ಉಗ್ರ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಷುಮಿಯ, ಎಐಟಿಯುಸಿ ಸಂಘದ ಜಿಲ್ಲಾಧ್ಯಕ್ಷ ಎಂ ಶಫೀ, ಹಟ್ಟಿ ಘಟಕದ ಅಧ್ಯಕ್ಷ ಶಾಂತಪ್ಪ ಆನ್ವರಿ, ವೆಂಕೋಬ ಮಿಯ್ಯಪೂರ, ಜಿಎಸ್ ಹನುಮಂತ, ಸಂಗಯ್ಯ, ಚಂದ್ರಶೇಖರ, ಸಿದ್ದಪ್ಪ ಮುಂಡರಗಿ, ಲಕ್ಷ್ಮಿ ದಡೆಸೂಗೂರು, ಆರೋಗ್ಯ, ಬಸವರಾಜ ಡಿಎಸ್ ಕಾಂಬ್ಳೆ, ಸಾವಿತ್ರಿ, ಆನಂದ ಕಟ್ಟಿಮನಿ, ಅಕ್ಕಮ್ಮ, ಗೌರಮ್ಮ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.