ಗುರುವಾರ , ನವೆಂಬರ್ 21, 2019
27 °C

ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ತವ್ಯಸ್ತ

Published:
Updated:
Prajavani

ಸಿರವಾರ: ತಾಲ್ಲೂಕಿನ ಮರಾಠ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 15 ಹೆಚ್ಚು ಜನ ವಾಂತಿ ಭೇದಿಯಿಂದ ಬಳಲುತ್ತಿದ್ದಾರೆ.

ಖಾಸಗಿ ವ್ಯಕ್ತಿಯ ಜಮೀನಿನ ಬೋರ್ ವೆಲ್ ಮೂಲಕ ನೀರು ಸಂಗ್ರಹಿಸಿ ಕುಡಿಯಲು ಬಳಸಲಾಗುತ್ತಿತ್ತು. ನೀರು ಸಂಗ್ರಹ ತೊಟ್ಟಿ ಸ್ವಚ್ಛಗೊಳಿಸಿರಲಿಲ್ಲ. ಈ ನೀರನ್ನು ಕುಡಿದ ಜನರು ವಾಂತಿ ಭೇದಿ ತೊಂದರೆಗೆ ಒಳಗಾಗಿದ್ದು, ಅವರನ್ನು ಪಟ್ಟಣದ ಖಾಸಗಿ ಮತ್ತು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮರಾಠ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಚಾರಿ ಆಸ್ಪತ್ರೆಯ ಮೂಲಕ ಎಲ್ಲಾ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು.

 ಕಾಯಿಸಿದ ಅಥವಾ ಶುದ್ಧ ನೀರನ್ನು ಕುಡಿಯಬೇಕು ಎಂದು ಗ್ರಾಮಸ್ಥರಿಗೆ ಡಾ. ಪರಿಮಳಾ ಮೈತ್ರಿ ಸೂಚಿಸಿದರು.

ಪ್ರತಿಕ್ರಿಯಿಸಿ (+)