ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರಿನಲ್ಲಿ ಎಡೆಬಿಡದ ಮಳೆ: ಮಸ್ಕಿಯಲ್ಲಿ ಜನರ ಜಾಗರಣೆ

Last Updated 27 ಜೂನ್ 2021, 6:01 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಡೀ ಮಳೆಯಾಗಿದ್ದು, ಮಸ್ಕಿ ಪಟ್ಟಣದ ಗಾಂಧಿನಗರದ‌ ಜನವಸತಿಗೆ ನೀರು ನುಗ್ಗಿದ್ದರಿಂದ ಜನರು ಜಾಗರಣೆ ಮಾಡಿದ್ದಾರೆ.

ಮನೆಯಿಂದ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಬೈಕ್, ಕಾರು ನೀರಿನಲ್ಲಿವೆ. ಜನಸಂಚಾರ ಸಾಧ್ಯವಿಲ್ಲದೆ, ಆಹಾರ ತಯಾರಿಸಿಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಮಸ್ಕಿ ತಾಲ್ಲೂಕಿನ ಹಾಲಾಪುರದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಕವಿತಾಳ ಮಾರ್ಗದ ಸಂಚಾರ ಸ್ಥಗಿತವಾಗಿದೆ. ಹಳ್ಳ ದಾಟಲು ಯತ್ನಿಸಿದ್ದ ಇಬ್ಬರು ಯುವಕರ ಅಪಾಯದಿಂದ ಪಾರಾಗಿದ್ದು, ಅವರಲ್ಲಿದ್ದ ಬೈಕ್ ಹಳ್ಳದಲ್ಲಿ ಕೊಚ್ಚಿಹೋಗಿದೆ.

ಮಳೆ ಈಗಲೂ ಮುಂದುವರಿದಿದೆ. ರಾಯಚೂರು ನಗರದಲ್ಲಿ ಕೆರೆಗೆ ಹೊಂದಿಕೊಂಡ ಇಳಿಜಾರು ಪ್ರದೇಶಗಳಲ್ಲಿ ನೀರು ನುಗ್ಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT