ಬುಧವಾರ, ಜನವರಿ 26, 2022
25 °C

ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ: ಕಾಂಗ್ರೆಸ್‌ ಮುಖಂಡ ಎನ್.ಎಸ್.ಭೋಸರಾಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವದುರ್ಗ: ‘ದೇಶದ ಜನರ ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಾಕಲಾಗುವುದು ಎಂಬ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಇಂದಿಗೂ ಹಣ ಹಾಕಿಲ್ಲ. ಅಲ್ಲದೇ ರಾಜ್ಯ ಸರ್ಕಾರ ಕೂಡ ಭ್ರಷ್ಟಾಚಾರದಲ್ಲಿ ಮುಳಗಿದೆ‘ ಎಂದು ಕಾಂಗ್ರೆಸ್‌ ಮುಖಂಡ  ಎನ್.ಎಸ್.ಭೋಸರಾಜು ಟೀಕಿಸಿದರು.

ಶನಿವಾರ ಪಟ್ಟಣದ ಬಿ.ಎಚ್. ಕಲ್ಯಾಣ ಮಂಟಪದಲ್ಲಿ ರಾಯಚೂರು-ಕೊಪ್ಪಳ ವಿಧಾನ ಪರಿಷತ್‍ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ಚುನಾವಣೆ ಸಂದರ್ಭದಲ್ಲಿ ಅವರು ನಮಗೆ ಮತ ನೀಡುವ ಭರವಸೆಯನ್ನು ನೀಡಿದ್ದಾರೆ. ಅಭ್ಯರ್ಥಿ ಶರಣಗೌಡ ಬಯ್ಯಾಪುರ ಗೆಲುವು ನಿಶ್ಚಿತವಾಗಿದೆ’ ಎಂದರು.

ಶಾಸಕರಾದ ಅಮರೇಗೌಡ ಪಾಟೀಲ ಬಯ್ಯಾಪುರ, ಡಿ.ಎಸ್‍ ಹೂಲಗೇರಿ, ರಾಘವೇಂದ್ರ ಹಿಟ್ನಾಳ ಮಾತನಾಡಿ,
‘ಪ್ರಕೃತಿ ವಿಕೋಪದಿಂದ ಎರಡು ಜಿಲ್ಲೆಗಳಲ್ಲಿ ಸಾಕಷ್ಟು ಬೆಳೆ ನಷ್ಟವಾಗಿದೆ. ರೈತ, ಕಾರ್ಮಿಕ, ಜನವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪಾಠ ಕಲಿಸಲು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಮುಂದಾಗಬೇಕು’ ಎಂದರು.

ಕಾಂಗ್ರೆಸ್‍ ಪಕ್ಷದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ.ನಾಯಕ, ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ, ಬಾದರ್ಲಿ ಹಂಪನಗೌಡ ಅವರು ಮಾತನಾಡಿ, ‘ರಾಯಚೂರು–ಕೊಪ್ಪಳ ಜಿಲ್ಲೆಗಳಲ್ಲಿ ಬಿಜೆಪಿಗೆ ಅಭ್ಯರ್ಥಿ ಸಿಕ್ಕಿಲ್ಲ. ಅನ್ಯ ಜಿಲ್ಲೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ‘ ಎಂದರು.

ವಿಧಾನ ಪರಿಷತ್‍ ಅಭ್ಯರ್ಥಿ ಶರಣಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ‘ಕಾಂಗ್ರೆಸ್‍ ಪಕ್ಷದ ಏಳೂವರೆ ದಶಕಗಳ ಸಾಧನೆ, ಪಕ್ಷದ ಮುಖಂಡ ಸಹಕಾರ ಚುನಾವಣೆಯಲ್ಲಿ ಗೆಲುವಿಗೆ ಸಹಕಾರ ಆಗಲಿವೆ’ ಎಂದು ಮನವಿ ಮಾಡಿದರು.

ಶಾಸಕರಾದ ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ, ಡಿ.ಎಸ್. ಹೂಲಗೇರಿ, ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಆದನಗೌಡ, ಅಜೀಜ್ ಸಬ್ ಬಸವರಾಜ ಪಾಟೀಲ ಇಟಗಿ, ಶರಣಪ್ಪ ಮೇಟಿ, ವಸಂತಕುಮಾರ, ಮರಿಲಿಂಗಪ್ಪ ಕೊಳೂರು, ಭೂತಪ್ಪ ಹೇರುಂಡ್ಡಿ, ಅಮರೇಶ ಬಲ್ಲಿದವ, ಭೀಮನಗೌಡ ನಗಡದಿನ್ನಿ, ಪುರಸಭೆ ಅಧ್ಯಕ್ಷ ಹನುಮಗೌಡ ಬಡಿಗೇರ, ಭೀಮಣ್ಣ ಗೋಸಾಲ್, ಶರಣಗೌಡ ಗೌರಂಪೇಟೆ, ರಾಮಣ್ಣ ಇರಬಗೇರಾ, ಎ.ರಾಜಶೇಖರ್ ನಾಯಕ, ವಸಂತ ಕುಮಾರ, ಮಲ್ಲಿಕಾರ್ಜುನ ಪಾಟೀಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು