ಗುರುವಾರ , ಅಕ್ಟೋಬರ್ 1, 2020
21 °C
ಆಗಸ್ಟ್‌ 10 ದಿನಗಳಲ್ಲಿ 1,500 ಗಡಿದಾಟಿ ಸೋಂಕಿತರು ಪತ್ತೆ

ರಾಯಚೂರು | ಕೋವಿಡ್‌ ಸೋಂಕಿತರ ಸಂಖ್ಯೆ, ಸಾವು ಹೆಚ್ಚಳ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲೆಯಲ್ಲಿ ಮೇ ತಿಂಗಳು ಪ್ರತಿದಿನ ಎರಡು ಅಂಕಿಯಲ್ಲಿ ಪತ್ತೆಯಾಗುತ್ತಿದ್ದ ಕೋವಿಡ್‌ ಸೋಂಕಿತರ ಸಂಖ್ಯೆ ಈಗ ಮೂರಂಕಿಗೆ ತಲುಪಿದೆ. ಮೇ, ಜೂನ್‌ನಲ್ಲಿ ಇಬ್ಬರು ಮಾತ್ರ ಕೋವಿಡ್‌ನಿಂದ ಮೃತಪಟ್ಟಿದ್ದರು. ಜುಲೈ ಹಾಗೂ ಆಗಸ್ಟ್‌ನಲ್ಲಿ ಸಾವುಗಳ ಸಂಖ್ಯೆ ಕೂಡಾ ಹೆಚ್ಚಳ ಆಗಿದೆ.

ಫಿವರ್‌ ತಪಾಸಣೆ ಕೇಂದ್ರಗಳಲ್ಲಿ ಪರೀಕ್ಷೆ, ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸುವುದು, ಕೋವಿಡ್‌ ಆಸ್ಪತ್ರೆ, ಹೋಂ ಐಸೋಲೇಷನ್‌ಗಳಲ್ಲಿ ನಿರಂತರ ಕೆಲಸ ನಡೆದಿದೆ. ಗಂಟಲು ದ್ರವ ಮಾದರಿ ಸಂಗ್ರಹ ಹೆಚ್ಚಳ ಮಾಡಿದಂತೆ ಕೋವಿಡ್‌ ದೃಢವಾದವರು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಆಗುತ್ತಿದ್ದಾರೆ. ಜಿಲ್ಲೆಯಲ್ಲಿ ಈಚೆ ಆ್ಯಂಟಿಜಿನ್‌ ಟೆಸ್ಟ್‌ ಆರಂಭಿಸಿದ ಬಳಿಕ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಜೂನ್‌, ಜುಲೈನಲ್ಲಿ ಪತ್ತೆಯಾಗಿದ್ದ ಸೋಂಕಿತರ ಸಂಖ್ಯೆಗಿಂತಲೂ ಆಗಸ್ಟ್‌ನಲ್ಲಿ ಮೂರು ಪಟ್ಟು ಏರುಗತಿ ಕಾಣುತ್ತಿದೆ. ಆರಂಭದ 10 ದಿನಗಳಲ್ಲಿಯೇ ಸೋಂಕಿತರ ಸಂಖ್ಯೆ ಒಂದೂವರೆ ಸಾವಿರ ಗಡಿ ದಾಟಿದೆ. ರೋಗದ ಲಕ್ಷಣಗಳನ್ನು ಆಧರಿಸಿ ವಿವಿಧ ಸ್ತರಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ರೋಗದ ಲಕ್ಷಣಗಳಿಲ್ಲದ ಸೋಂಕಿತರನ್ನು ಸರ್ಕಾರಿ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಇರಿಸಲಾಗುತ್ತದೆ. ಅನಾರೋಗ್ಯ ಕಂಡುಬಂದವರನ್ನು ಮಾತ್ರ ಓಪೆಕ್‌ಗೆ ರವಾನಿಸಲಾಗುತ್ತದೆ. ಸೋಂಕಿತರು ಹೋಂ ಐಸೋಲೇಷನ್‌ ಇರುವುದಕ್ಕೂ ಅವಕಾಶ ಮಾಡಲಾಗಿದೆ.

ನೆಗಡಿ, ಜ್ವರ ಹಾಗೂ ಕೆಮ್ಮು ಇರುವ ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುವುದಕ್ಕೆ ಜಿಲ್ಲೆಯಲ್ಲಿ 12 ಸಂಚಾರಿ ವ್ಯಾನ್‌ಗಳಿವೆ. ಆ್ಯಂಟಿಜನ್‌ ಟೆಸ್ಟ್‌ ಮೂಲಕ ತತಕ್ಷಣವೇ ವರದಿ ಪಡೆಯಲಾಗುತ್ತಿದೆ. ಅಗತ್ಯ ಎನಿಸಿದರೆ ಐಆರ್‌ ಯಂತ್ರದಲ್ಲಿಯೂ ಕೆಲವನ್ನು ತಪಾಸಣೆ ಮಾಡಲಾಗುತ್ತಿದೆ. ನಾಲ್ಕು ಹಂತಗಳಲ್ಲಿ ಕೋವಿಡ್‌ ಸೋಂಕು ಹರಡುವುದನ್ನು ನಿರ್ವಹಿಸಲಾಗುತ್ತಿದೆ.

ಕೋವಿಡ್‌ ದೃಢವಾದವರ ಸೋಂಕಿನ ಮೂಲ ಪತ್ತೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಹಳಷ್ಟು ಸೋಂಕಿತರ ಮೂಲ ಇದುವರೆಗೂ ಪತ್ತೆಯಾಗಿಲ್ಲ. ಆದರೆ, ಪರೀಕ್ಷೆ ನಡೆಸುವುದನ್ನು ವ್ಯಾಪಕ ಮಾಡಲಾಗಿದೆ. ಪ್ರತಿದಿನ ಸರಾಸರಿ 500 ಕ್ಕೂ ಹೆಚ್ಚು ವರದಿಗಳು ಬರುತ್ತಿವೆ. ಮೂರಂಕಿಯಷ್ಟು ಸೋಂಕಿತರು ಪತ್ತೆ ಆಗುತ್ತಲೇ ಇದ್ದಾರೆ. ಅದರಲ್ಲೂ ರಾಯಚೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಸೋಂಕಿತರಿದ್ದಾರೆ.

ಕೋವಿಡ್‌ ಸೋಂಕು ತಡೆ ಮುನ್ನೆಚ್ಚೆರಿಕೆ ಕ್ರಮಗಳ ಜಾರಿಯನ್ನು ಪೊಲೀಸರು ಮಾಡುತ್ತಿದ್ದಾರೆ. ಮಾಸ್ಕ್‌ ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸುತ್ತಿದ್ದಾರೆ. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದು ಸೋಜಿಗ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು