ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ತಡೆಗೆ ಜಿಲ್ಲೆಯಾದ್ಯಂತ ಮುನ್ನಚ್ಚರಿಕೆ

ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ
Last Updated 13 ಮಾರ್ಚ್ 2020, 12:59 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್‌–19 ವೈರಸ್ ಹರಡದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಸಿಂಧನೂರು, ದೇವದುರ್ಗ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿ ವಿದೇಶಗಳಿಂದ ವಾಪಸ್ ಆಗಿರುವವರ ಆರೋಗ್ಯ ತಪಾಸಣೆ ಮಾಡಿ ಕುಟುಂಬದ ಎಲ್ಲ ಸದಸ್ಯರ ಮೇಲೂ ನಿಗಾ ವಹಿಸಲಾಗಿದೆ. ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆಗಳ ಸಮನ್ವಯತೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್‌ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಕೋವಿಡ್‌–19 ಮುನ್ನಚ್ಚರಿಕೆ ವಹಿಸಲು ಜಾಗೃತಿ ಮಾಡಿಸುವ’ ಸಭೆ ಮಾತನಾಡಿದರು.

ಕೊರೋನಾ ವೈರಸ್ ಮಾರಕ ಕಾಯಿಲೆಯಾಗಿದ್ದರೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪ್ರಭಾವ ಕಡಿಮೆಯಾಗಿದೆ. ಇದರಿಂದ ಒಟ್ಟಾರೆ ಸಾವಿನ ಪ್ರಮಾಣ ಶೇ 2 ಕ್ಕಿಂತ ಕಡಿಮೆಯಾಗಿದೆ. ಆದರೂ ಕೂಡ ಆರೋಗ್ಯ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಕೊಳ್ಳಲಾಗಿದೆ. ವಿದೇಶದಿಂದ ಬಂದ ನಿವಾಸಿಯನ್ನು ತಪಾಸಣೆ ಮಾಡಿದ್ದು ರೋಗ ಲಕ್ಷಣಗಳು ಕಂಡು ಬಂದಿಲ್ಲ. ಅದರೂ ಸಹ 14 ದಿನಗಳವರೆಗೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ವಿದೇಶಗಳಿಂದ ಬಂದವರು ತಪಾಸಣೆ ಮಾಡಿಕೊಂಡಿದ್ದರೂ ಕೂಡ 14 ದಿನಗಳ ಒಳಗೆ ನಿಖರವಾಗಿ ಹೇಳಲು ಆಗುವುದಿಲ್ಲ. 14 ದಿನಗಳ ಕಾಲ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ತಂಡವು ನಿಗಾ ವಹಿಸಲಿದ್ದರೆ. ಇನ್ನೂ ಸರ್ಕಾರದ ಗಮನಕ್ಕೇ ಬಾರದೆ ವಿದೇಶಗಳಿಂದ ಜಿಲ್ಲೆಗೆ ಆಗಮಿಸಿದವರು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಹಾಗೂ ಸಾರ್ವಜನಿಕರೂ ಅಂಥವರ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಅಂಗನವಾಡಿ, ಆಶಾ ಕಾರ್ತಕರ್ತೆಯರು ಹಾಗೂ ಸಿಬ್ಬಂದಿಗೆ ತರಬೇತಿ ನೀಡಿ ಮನೆ ಮನೆಗೆ ಜಾಗೃತಿ ಮೂಡಿಸಲಾಗುವುದು. ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಬೇಸಿಗೆ ಶಿಬಿರ, ಬೃಹತ್ ಮಟ್ಟದ ಕಾರ್ಯಕ್ರಮ ರದ್ದುಪಡಿಸಲು ಹೇಳಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಬೃಹತ್ ಮಟ್ಟದ ಕಾರ್ಯಕ್ರಮ ಜಾತ್ರೆ ಹಾಗೂ ವಿವಾಹ ಇತರೆ ಕಾರ್ಯಕ್ರಮ ನಡೆಯುವ ಮುನ್ನ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜನಜಂಗುಳಿ ಪ್ರದೇಶಗಳಿಂದ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರ ಇರಬೇಕು. ಇಂತಹ ಕಾರ್ಯಕ್ರಮದ ಪೂರ್ವ ಮಾಹಿತಿ ನೀಡಿದ್ದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೇಯ ತಂಡದ ವ್ಯವಸ್ಥೆ ಮಾಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ರಿಮ್ಸ್‌ನಲ್ಲಿ ಈಗಗಲೇ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು ಶಂಕಿತ ವ್ಯಕ್ತಿಗಳಿಗೆ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮನರಂಜನೆಗಾಗಿ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳು ಹಾಗೂ ವಿವಿಧ ಕಡೆಗಳಿಂದ ಉದ್ಯಮಿಗಳು ರಾಯಚೂರಿನ ಡಿವಿಆರ್ ಕ್ಲಬ್‌ಗೆ ಬರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆದೇಶದ ಅನ್ವಯ ಡಿವಿಆರ್ ಸೇರಿ ಜಿಲ್ಲೆಯ ಎಲ್ಲಾ ಕ್ಲಬ್ ಬಂದ್ ಮಾಡಲು ಸೂಚಿಸಲಾಗಿದೆ ಎಂದರು.

ಕೊರೋನಾ ವೈರಸ್ ಬಗ್ಗೆ ಸಾಮಾಜಿಕ ಜಾಲಾತಾಣಗಳಲ್ಲಿ ಅನಗತ್ಯ ಭೀತಿ ಹುಟ್ಟಿಸುವವರ ಮೇಲೆ ನಿಗಾ ಇರಸಿದ್ದು ಅನಗತ್ಯ ಗೊಂದಲಕಾರಿ ಸಂದೇಶ ರವಾನಿಸಿದ್ದಲ್ಲಿ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳಲಾಗುವುದು. ಆರೋಗ್ಯ ಇಲಾಖೇಯಿಂದ ಕಂಟ್ರೋಲ್ ರೂಂ ತೆರೆಯಲಾಗಿದೆ. ತಹಶೀಲ್ದಾರ್‌ ನೇತೃತ್ವದಲ್ಲಿ ಜಾಗೃತಿಗಾಗಿ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಡಾಸ್ಕ್ ಫೋರ್ಸ್ ಸಭೆ ಮಾಡಲು ಸೂಚಿಸಲಾಗಿದೆ. ಸಾರ್ವಜನಿಕರು ಭಯಭೀತರಾಗಬಾರದು. ಕೈ ತೊಳೆದುಕೊಳ್ಳುವ ರೂಢಿ ಬೆಳೆಸಿಕೊಳ್ಳಿರಿ, ಇದರಿಂದ ವೈರಸ್‌ನಿಂದ ಬಚಾವ್ ಆಗಬಹುದು ಎಂದರು.

ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಅಧಿಕಾರಿ ಅನಿಲಕುಮಾರ್‌ ಮಾತನಾಡಿ, ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಟೇಬಲ್ ಹಾಗೂ ಇತರೆ ಪೀಠೋ‍ಪಕರಣಗಳನ್ನು ಡೆಟಾಲ್ ಇತರೆ ಕ್ರೀಮ್ ಗಳಿಂದ ಶುಚಿಯಾಗಿಟ್ಟುಕೊಳ್ಳಬೇಕು. ಸಾರ್ವಜನಿಕರೊಂದಿಗೆ ವ್ಯವಹರಿಸುವುದರಿಂದ ಸಾಬೂನಿನಿಂದ ಗಂಟೆಗೊಮ್ಮೆ ಕೈ ತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಕೈತೊಳೆದುಕೊಳ್ಳುವುದರಿಂದ ವೈರಸ್ ನಿಂದ ಬಚಾವಾಗಬಹುದು. ಕೆಮ್ಮು ಉಸಿರಾಟ ತೊಂದರೆ, ನೆಗಡಿ, ವಾಂತಿಭೇದಿ ಆಗಿದ್ದಲ್ಲಿ ವೈದ್ಯರ ಸಂಪರ್ಕ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಿಕ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT