ಶುಕ್ರವಾರ, ನವೆಂಬರ್ 22, 2019
22 °C

ಹಾಡುಹಗಲೇ ಮಹಿಳೆ ಕೈಲಿದ್ದ ಹಣ ದರೋಡೆ: ಪ್ರಕರಣ ದಾಖಲು

Published:
Updated:

ರಾಯಚೂರು: ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೊರಟಿದ್ದ ಮಹಿಳೆಯ ಕೈಯಲ್ಲಿದ್ದ ₹53 ಸಾವಿರ ನಗದಿನ ಚೀಲವನ್ನು ದರೋಡೆಕೋರರು ದೋಚಿ ಪರಾರಿಯಾದ ಘಟನೆ ನಗರದ ಮಹಾತ್ಮಗಾಂಧಿ ವೃತ್ತದ ಬಳಿ ಇರುವ ಎಸ್‌ಬಿಐ ಬ್ಯಾಂಕ್ ಶಾಖೆ ಎದುರು ಶುಕ್ರವಾರ ಹಾಡುಹಗಲೆ ನಡೆದಿದೆ.

ಜಲಾಲ ನಗರದ ನಿವಾಸಿ ಮಾಣಿಕ್ಯಮ್ಮ ಅವರ ಹಣ ದರೋಡೆಯಾಗಿದೆ. ಎದುರಿಗೆ ಬಂದ ಯುವಕ ಮಹಿಳೆಯ ಕೈಯಲ್ಲಿ ಇದ್ದ ಹಣದ ಚೀಲ ಕಸಿದುಕೊಂಡು, ರಸ್ತೆಯಲ್ಲಿ ಬೈಕ್‌ನಲ್ಲಿ ಕಾಯುತ್ತಿದ್ದ ತನ್ನ ಸಹಚರನೊಂದಿಗೆ ಪರಾರಿಯಾಗಿದ್ದಾನೆ.

ನಗದು, 2 ಲಕ್ಷ ಮೌಲ್ಯದ ಬಾಂಡ್‌ಗಳು ಮತ್ತು ಬೀರುವಿನ ಕೀಲಿ ಕೈಗಳು ಹಾಗೂ ಚೀಲ ಕಿತ್ತುಕೊಂಡು ಓಡಿ ಹೋಗಿದ್ದಾರೆ. ಘಟನೆ ಸ್ಥಳಕ್ಕೆ ಸದರ್ ಬಜಾರ್ ಪೊಲೀಸ್ ಠಾಣೆಯ ಪೊಲೀಸರು ಧಾವಿಸಿ ಪರಿಶೀಲಿಸಿದರು.

ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

ಪ್ರತಿಕ್ರಿಯಿಸಿ (+)