ಮಂಗಳವಾರ, ಜನವರಿ 21, 2020
27 °C

ಕೆರೆಯಲ್ಲಿ ಮೊಸಳೆ ಪ್ರತ್ಯೇಕ್ಷ: ಗ್ರಾಮಸ್ಥರಲ್ಲಿ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನಗರದ ಹೊರವಲಯದ ಮನ್ಸಲಾಪುರ ಕೆರೆಯಲ್ಲಿ ಗುರುವಾರ ಮೊಸಳೆ ಪ್ರತ್ಯೇಕ್ಷವಾಗಿದ್ದು, ಗ್ರಾಮಸ್ಥರು ಭಯ ಪಡುವಂತಾಗಿದೆ.

ಕೆರೆಯೊಳಗಿನ ಕಲ್ಲುಬಂಡೆಯ ಮೇಲೆ ಮೊಸಳೆ ಇರುವುದನ್ನು ನೋಡಿ, ಯುವಕನೊಬ್ಬ ಛಾಯಾಚಿತ್ರ ಸೆರೆಹಿಡಿದಿದ್ದ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೆರೆಯ ಸುತ್ತಮುತ್ತ ಜನರು ಹೋಗಬಾರದು ಮತ್ತು ಕೆರೆಯಲ್ಲಿ ಜಾನುವಾರುಗಳು ತೆರಳದಂತೆ ಸೂಚನಾ ಫಲಕ ಹಾಕುವುದಕ್ಕೆ ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದೆ. ಈಗಾಗಲೇ ಕೆರೆ ಪಕ್ಕದಲ್ಲಿ ಈ ಬಗ್ಗೆ ಸೂಚನಾ ಫ್ಲೆಕ್ಸ್‌ ಅಳವಡಿಸಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು