ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿನಗರ: ಸಾಂಸ್ಕೃತಿಕ ಸಂಭ್ರಮ

Last Updated 12 ಆಗಸ್ಟ್ 2021, 11:32 IST
ಅಕ್ಷರ ಗಾತ್ರ

ಶಕ್ತಿನಗರ: ‘ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕು‘ ಎಂದು ದೇವಸೂಗೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಸತೀಶಕುಮಾರ ಹೇಳಿದರು.

ದೇವಸೂಗೂರು ಡಾ.ಬಾಬು ಜಗಜೀವನರಾಮ್‌ ರಂಗ ನಿರಂತರ ಸಾಂಸ್ಕೃತಿಕ ಕಲಾ ಸಂಸ್ಥೆ , ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಕ್ತಿನಗರದ ಬಸವ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಮಾಡಿರುವುದು ಸಂಸ್ಥೆಯ ಕಾರ್ಯವನ್ನು ಶ್ಲಾಘನೀಯ. ಸಾಮಾಜಿಕ ಸ್ಥಿತಿಗತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವುದು ಕಲಾವಿದರೂ ಮಾತ್ರ , ಇಂತಹ ಸಂಸ್ಕೃತಿ ಸೌರಭ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರೂ ವೀಕ್ಷಿಸುವ ಮೂಲಕ ಕಲಾವಿದರಿಗೆ ಪ್ರೋತ್ಸಾಹಿಸಬೇಕು. ಅವರ ವೃತ್ತಿ ಬದುಕಿಗೆ ಹೆಚ್ಚು ಅನುಕೂಲವಾಗಲಿ ಎಂದರು.

ದೇವಸೂಗೂರು ಡಾ.ಬಾಬು ಜಗಜೀವನರಾಮ್‌ ರಂಗ ನಿರಂತರ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮೀ ಉರುಕುಂದಪ್ಪ ಅಧ್ಯಕ್ಷತೆ ವಹಿಸಿದ್ದರು.‌‌‌

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ , ದಾಸವಾಣಿ , ಜಾನಪದ ಸಂಗೀತ , ಭಕ್ತಿಗೀತೆ, ತತ್ವಪದ, ಸುಗಮ ಸಂಗೀತಗಳನ್ನು , ವಿವಿಧ ಗಾಯಕರು ಹಾಡುವ ಮೂಲಕ ಜನರಿಗೆ ಮನರಂಜಿಸಿದರು.

ಕಲಾವಿದ ವೆಂಕಟ ನರಸಿಂಹಲು ತಂಡದವರಿಂದ ‘ಕಳ್ಳ ಗುರು ಸುಳ್ಳು ಶಿಷ್ಯ’ ಎಂಬ ನಾಟಕವನ್ನು ಪ್ರದರ್ಶಿಸಿದರು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಮತ್ತು ಕಲಾವಿದನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖಂಡರಾದ ಎಂ.ನರಸನಗೌಡ, ಪಿ.ಶ್ರೀನಿವಾಸರೆಡ್ಡಿ ,ವೆಂಕನಗೌಡ, ಡಾ.ಪ್ರಕಾಶಯ್ಯನಂದಿ, ಬಿ.ಸೂಗಪ್ಪ, ಸಣ್ಣ ಕರಿಯಪ್ಪ , ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ , ಆರ್‌ಟಿಪಿಎಸ್‌ ನೌಕರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ , ಕರ್ನಾಟಕ ವಿದ್ಯುತ್ ನಿಗಮ ನೌಕರರ ಸಂಘದ ಅಧ್ಯಕ್ಷ ಜಗದೀಶ ಸಮಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT