ಸಿಂಧನೂರು: ಸಿಂಧನೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗಕ್ಕೆ ಕಿರಿಯ ಎಂಜಿನಿಯರ್ ಆಗಿ ನಾಗರಾಜ ಪ್ರಭಾ ಅವರಿಗೆ ಸ್ಥಳ ನಿಯುಕ್ತಿ ಮಾಡಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಾಲ್ಲೂಕು ಘಟಕದಿಂದ ಶನಿವಾರ ಸಹಾಯಕ ಕಾರ್ಯಪಾಲಕ ಎಂಜನಿಯರ್ ವಿಜಯಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಜೆಜೆಎಂ ಕಳಪೆ ಕಾಮಗಾರಿ ಸೇರಿ ಮತ್ತಿತರ ಯೋಜನೆಯ ಕುಡಿಯುವ ನೀರು ಕಾಮಗಾರಿಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ಜೆಇ ನಾಗರಾಜ ಪ್ರಭಾ ಗುತ್ತಿಗೆದಾರ ಜೊತೆ ಶಾಮೀಲಾಗಿ ಅವ್ಯವಹಾರ ನಡೆಸಿದ್ದಾರೆ. ಜೊತೆಗೆ ಕಳಪೆ ಕಾಮಗಾರಿ ಮತ್ತು ದುರ್ನಡತೆ ಕುರಿತು ಸಾಕಷ್ಟು ದೂರುಗಳಿವೆ. ಲೋಕಾಯುಕ್ತರ ಕಚೇರಿಯಲ್ಲಿ ವಿಚಾರಣೆ ಬಾಕಿ ಇದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಾಗರಾಜ ಪ್ರಭಾರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಜಾರಿ ಮಾಡಿದ್ದರು. ಈಗ ಸಿಂಧನೂರು ಉಪ-ವಿಭಾಗಕ್ಕೆ ಸ್ಥಳ ನಿಯುಕ್ತಿಗೊಳಿಸಿ ಆದೇಶ ನೀಡಿರುವುದು ಖಂಡನೀಯ. ಇದನ್ನು ತಕ್ಷಣವೇ ರದ್ದುಗೊಳಿಸಬೇಕು’ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ವಿರುಪಾಕ್ಷಿ ಸಾಸಲಮರಿ ಅವರು ಎಇಇ ವಿಜಯಲಕ್ಷ್ಮಿ ಅವರ ಗಮನ ಸೆಳೆದರು.

ನಗರ ಘಟಕದ ಅಧ್ಯಕ್ಷ ಜಾವೀದ್, ಸದಸ್ಯ ಗೌತಮ್ ಬುದ್ಧ, ಅಯ್ಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.