ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ವ್ಯಕ್ತಿಯ ಜೊತೆ ದೀಪಾವಳಿ

Last Updated 28 ಅಕ್ಟೋಬರ್ 2019, 13:59 IST
ಅಕ್ಷರ ಗಾತ್ರ

ಲಿಂಗಸುಗೂರು: ದೀಪಾವಳಿ ಎಂದಾಕ್ಷಣ ಮನಸೋ ಇಚ್ಛೆ ಪಟಾಕಿಗಳನ್ನು ಸುಟ್ಟು ಸಂಭ್ರಮಿಸುವ ಹಬ್ಬ. ಆದರೆ, ಸ್ಥಳೀಯ ವಿನಯ್‌ ಎಂಟರ್‌ಪ್ರೈಸಸ್‌ ಸೋಲಾರ ಉಪಕರಣಗಳ ಮಾರಾಟ ಅಂಗಡಿ ಮಾಲೀಕರು ಪಟಾಕಿ ಸುಡುವ ಹಣವನ್ನು ಅಂಧ ವ್ಯಕ್ತಿಯೊಬ್ಬರಿಗೆ ದೇಣಿಗೆ ನೀಡುವ ಮೂಲಕ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು.

ಅಂಗಡಿ ಪೂಜೆಗೆ ಬಂದಿದ್ದ ಕೆಲವರು ಮಾಲೀಕ ಶಿವಕುಮಾರ ಮತ್ತು ಅಮರೇಶ ಗೌಡರ್‌ ಸಾರಥ್ಯದಲ್ಲಿ ಬದುಕಿನಲ್ಲಿ ಬೆಳಕನ್ನೆ ಕಾಣದ ಅಂಧ ವ್ಯಕ್ತಿಯೊ ಅಮರೇಶ ವಿಶ್ವಕರ್ಮ ಅವರನ್ನು ಸನ್ಮಾನಿಸಿ ಪಟಾಕಿ ಸುಡುವ ಹಣವನ್ನು ನೀಡಿ ಗೌರವಿಸಿದರು.

ಹಿರಿಯ ವೈದ್ಯ ಡಾ.ಶಿವಬಸಪ್ಪ ಹೆಸರೂರು ಮಾತನಾಡಿ, ‘ದೀಪಾವಳಿ ಆಚರಿಸುವ ಎಲ್ಲರೂ ಇಂತಹ ಪದ್ಧತಿಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.

ಹುನಕುಂಟಿ ಶರಣಯ್ಯ ತಾತ ಸಾನ್ನಿಧ್ಯ ವಹಿಸಿದ್ದರು. ಜಡೆಯ್ಯಶಾಸ್ತ್ರಿ ಹಿರೇಮಠ, ಸೂಗಯ್ಯ ಸಂತೆಕೆಲ್ಲೂರು ನೇತೃತ್ವ ವಹಿಸಿದ್ದರು. ಮುಖಂಡರಾದ ಶರಣಯ್ಯ ಗೊರೆಬಾಳ, ಜಂಗಮಮೂರ್ತಿ, ಶಿವಾನಂದ ಐದನಾಳ, ಗಿರಿಮಲ್ಲನಗೌಡ ಕರಡಕಲ್ಲ, ವೆಂಕನಗೌಡ ಪಾಟೀಲ, ಎಚ್‌.ಬಿ. ಮುರಾರಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT